ಬೆಂಗಳೂರು: ಸಿಎಂ ಸಿದ್ದರಾಮಯ್ಯನವರನ್ನು ಅಸಮರ್ಥ ಸಿಎಂ, ಅಸಮರ್ಥ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದರು.ಆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌ ಅದು ಅವರ ಅನಿಸಿಕೆ ,ಅಭಿಪ್ರಾಯ ಆದರೆ ಸಿಎಂ ಸಿದ್ದರಾಮಯ್ಯನವರು ನಮ್ಮ ದೃಷ್ಟಿಯಲ್ಲಿ ಸಮರ್ಥ ಮುಖ್ಯಮಂತ್ರಿ ನಮ್ಮದು ಸಮರ್ಥ ಸರ್ಕಾರ ಎಂದು ಪರಮೇಶ್ವರ್‌ ತಿರುಗೇಟನ್ನು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್‌ ಅಹ್ಮದ್‌ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕಾಲಿಯ ಎಂದು ಕರೆದಿದ್ದಾರೆ, ಅದು ಅವರ ಪರ್ಸನಲ್‌ ಮ್ಯಾಟರ್‌, ನಾವಿಬ್ಬರೂ ಸ್ನೇಹಿತರು ನಮ್ಮ ನಡುವೆ ಅಷ್ಟರಮಟ್ಟಿಗೆ ಸಲುಗೆಯಿದೆ.ಜಗಳ ಮಾಡ್ತೀವಿ, ಬೈಕೊತೀವಿ ಎಂದು ಜಮೀರ್‌ ಅಹ್ಮದ್‌ರವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಈ ರೀತಿಯ ಅಭಿಪ್ರಾಯಗಳನ್ನು ತಿಳೀಸುವುದು ಸಣ್ಣಪುಟ್ಟ ವಿಚಾರಗಳಷ್ಟೇ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *