ವಿಜಯಪುರ: ನಗರದಲ್ಲಿಂದು ವಕ್ಫ್ ಅದಾಲತ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಮೀರ್ ಅಹ್ಮದ್ರವರು ಬಿಜೆಪಿ ಶಾಸಕರಾದ ಬಸವರಾಜ್ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಕ್ಫ್ ಆಸ್ತಿಯನ್ನು ದಾನಿಗಳು ದಾನ ಮಾಡಿರುವುದು.ಇದರಲ್ಲಿ ಸರ್ಕಾರದ ನಿವೇಶನವಿಲ್ಲವೆಂದು ಜಮೀರ್ ಹೇಳಿದ್ದಾರೆ.ಅದೇ ವೇಳೆಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಯೂ ಯತ್ನಾಳ್ರವರ ಅಪ್ಪನ ಆಸ್ತಿಯಲ್ಲ, ನಮ್ಮಪ್ಪನ ಆಸ್ತಿಯಲ್ಲ, ನಿಮ್ಮಪ್ಪನ ಆಸ್ತಿಯಲ್ಲ. ಈ ಆಸ್ತಿಯು ಸಮಾಜಕ್ಕೆ ಒಳಿತಾಗಲೆಂದು ದಾನಿಗಳು ದಾನ ಮಾಡಿರುವ ಆಸ್ತಿಯಾಗಿದೆ.ಇದರಲ್ಲಿ ಸರ್ಕಾರದ ಜಾಗ ಒಂದಿಂಚು ಇಲ್ಲ ತಿಳ್ಕೊಳ್ಳಿ ಮಿಸ್ಟರ್ ಯತ್ನಾಳ್ ಎಂದು ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.