ಯುವರಾಜ್‌ಕುಮಾರ್ ನಟಿಸಲಿರುವ ಚಿತ್ರದ ಹೆಸರನ್ನು ಅನೌನ್ಸ್ ಮಾಡಿದ್ದು, ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯುವರಾಜ್‌ಕುಮಾರ್ ನೆಕ್ಸ್ಟ್ ಯಾವ ಮೂವೀ ಮಾಡ್ತಾರೆ ಎನ್ನುವ ಅಭಿಮಾನಿಗಳು ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ ಎನ್ನಬಹುದು. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಯುವರಾಜ್‌ಕುಮಾರ್ ಆಯುಧವಿಡಿದು ರಕ್ತದಲ್ಲಿ ಮುಳುಗಿರುವ ರೀತಿ ಇದ್ದು ಈ ಸಿನಿಮಾದ ಟೈಟಲ್ “ಎಕ್ಕ” ಈ ಟೈಟಲ್ ಅಭಿಮಾನಿಗಳನು ಅಕರ್ಷಿಸಿ ಅವರ ಮನಸ್ಸಲ್ಲಿ ಕುತೂಹಲವನ್ನು ಮೂಡಿಸಿದೆ.
ಟೈಟಲ್ ಕಾರ್ಡನ್ನು ಬಿಡುಗಡೆ ಮಾಡಿರುವ ಇವರು, ಪ್ರಪಂಚದಲ್ಲಿ ಎಲ್ಲರೂ ಪಾಪದಲ್ಲಿ ಪಾಲುದಾರರು ಎಂದು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಎಕ್ಕ” ಚಿತ್ರವನ್ನು ಪಿಆರ್‌ಕೆ ಪ್ರೋಡಕ್ಷನ್ ಹೌಸ್‌ನ ಅಡಿಯಲ್ಲಿ ಅಸ್ವಿನಿ ಪುನೀತ್ ರಾಜ್‌ಕುಮಾರ್ , ಭೋಗೆಂದ್ರ ಮತ್ತು ಜಯಣ್ಣ ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.