ರೀಲ್ಸ್ ಮಾಡುವ ವೇಳೆ ಸಾವನ್ನಪ್ಪಿರುವ ಘಟನೆಯು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ರೀಲ್ಸ್‌ಗಳನ್ನು ಮಾಡಿ ಫೇಮಸ್ ಅಗಲು ಹಲವು ರೀತಿಯ ಡೆಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ.ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಯುವಕ ರೀಲ್ಸ್ ಮಾಡುವ ವೇಳೆ ಕಬ್ಬಿಣದ ಗ್ಯಾಲರಿಯೊಳಗೆ ಬಿದ್ದು ಯುವಕನ ದೇಹದಿಂದ ರುಂಡ-ಮುಂಡಗಳು ಬೇರ್ಪಟ್ಟಿದೆ. ಜೊತೆಯಲ್ಲಿದ್ದವರು ತಕ್ಷಣವೇ ಪ್ರಾಣವನ್ನು ಉಳಿಸಲುಪ್ರಯತ್ನ ಮಾಡಿದ್ದಾರೆ.ಆದರೆ ಅಷ್ಟೊತ್ತಿಗಾಗಲೇ ಯುವಕನ ತಲೆಯು 4ನೇ ಅಂತಸ್ತಿನಿಂದ ಮೂರನೇ ಅಂತಸ್ತಿಗೆ ಬಿದ್ದಿದೆ.
ರೀಲ್ಸ್ ಮಾಡುವಾಗ ಸಾವನಪ್ಪಿರುವ ಯುವಕನು ಆಸಿಫ್ ಎಂದು ತಿಳಿದುಬಂದಿದ್ದು, ಈ ಘಟನೆಯು ಅಬಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮೃತನ ದೇಹವನ್ನು ಪೋಸ್ಟ್‌ಮಾರ್ಟಮ್ ಮಾಡಲು ದವಾಖಾನೆಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.