ಮಧ್ಯಪ್ರದೇಶ: ಭಾರತದಲ್ಲಿಜೀವನ ನಡೆಸಲು ಬಯಸುವವರೆಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನಬೇಕು” ಎಂಬ ಹೇಳಿಕೆ ನೀಡುವುದರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೊಸ ವಿವಾದವನ್ನ  ಸೃಷ್ಟಿಸಿದ್ದಾರೆ.

ಅಶೋಕನಗರ ಜಿಲ್ಲೆಯ ಚಂಡೇರಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, “ತಮ್ಮ ತಮ್ಮ ಧರ್ಮವನ್ನು ಅನುಸರಿಸುವ ಅವಕಾಶವು ಎಲ್ಲ ಧರ್ಮದವರಿಗೂ ಇದೆ. ಆದರೆ ಅವರು ದೇಶಭಕ್ತರಾಗಿರಬೇಕು” ಎಂದು ಹೇಳಿದ್ದಾರೆ.

“ಭಾರತವು ಏಕತೆಯನ್ನು ಪ್ರತಿನಿಧಿಸುತ್ತದೆ. ರಹೀಮ್ ಹಾಗೂ ರಾಸ್ ಖಾನ್ (ಹಿಂದೂ ದೇವರ ಗುಣಗಾನ ಮಾಡಿದ್ದ ಮಧ್ಯಕಾಲೀನ ಭಾರತದ ಕವಿ ಹಾಗೂ ಸಂತರು) ಇದೇ ನೆಲದಲ್ಲಿ ಜನಿಸಿದವರು” ಎಂದೂ ಈ ವೇಳೆಯಲ್ಲಿ  ತಿಳಿಸಿದ್ದಾರೆ.

Leave a Reply

Your email address will not be published. Required fields are marked *