ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವಿನೇಶ್ ಫೋಗಟ್ 6015 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದ ಸಂಭ್ರಮದಲ್ಲಿದ್ದಾರೆ.
ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ ಆರು ಸಾವಿರದ ಹದಿನೈದು ಮತಗಳ ಅಂತರದಿಂದ ಗೆಲುವು ಪಡೆದುಕೊಂಡ ವಿನೇಶ್ ಫೋಗಟ್ “ಇದು ಸತ್ಯದ ಗೆಲುವು, ನನ್ನನ್ನು ಗೆಲ್ಲಿಸಿದ ನಿಮ್ಮ ಪ್ರೀತಿ, ನಂಬಿಕೆಗೆ ಸದಾ ಚಿರಋಣಿಯಾಗಿರುತ್ತೇನೆಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಸತ್ಯದ ಗೆಲುವು : ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಮತ್ತು ಕಾಪಾಡಿಕೊಳ್ಳುತ್ತೇನೆ ಎಂದಿರುವ ವಿನೇಶ್ ಫೋಗಟ್ ಸೋಲಿನ ಬಗ್ಗೆ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ. ಫಲಿತಾಂಶ ಇನ್ನೂ ಮುಗಿದಿಲ್ಲ. ಇನ್ನೂ ಸ್ವಲ್ಪ ಸಮಯ ಕಾಯೋಣ ,ಇನ್ನೂ ಕೌಂಟಿಂಗ್ ನಡೆಯುತ್ತಿದೆ ಎಂದು ಹೇಳಿದ್ದಾರೆ,
ಇದುಎಲ್ಲಾ ಯುವತಿಯರ ಗೆಲುವು ನನಗೆ ದೇಶ ಕೊಟ್ಟಿರುವ ಪ್ರೀತಿ-ನಂಬಿಕೆಯನ್ನು ಉಳಿಸುತ್ತೇನೆ. ಹರಿಯಾಣದ ಜನರಿಗಾಗಿ ಜನರ ಮತ್ತು ಜನರ ಅಭಿವೃದ್ದಿಗಾಗಿ ದುಡಿಯುತ್ತೇನೆ ಆಶೀರ್ವಾದವನ್ನು ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.