ಬಿಗ್‌ಬಾಸ್ ಮನೆಯಲ್ಲಿ ಕಿಚ್ಚು ಹೆಚ್ಚುತ್ತಾ ಹೋಗುತ್ತಿದೆ. 50 ದಿನ ಪೂರೈಸಿದ ಸ್ಪರ್ಧಿಗಳ ಜೊತೆಗೆ ವೈಲ್ಡ್‌ಕಾರ್ಡ್ ಎಂಟ್ರಿಯಾಗಿರುವ ಶೋಭಾ ಶೆಟ್ಟಿ ಮತ್ತು ರಜತ್ ತಮ್ಮ ಆಟವನ್ನು ಶುರು ಮಾಡಿದ್ದಾರೆ. ಇಂದು ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಪಂಚಾಯ್ತಿಯನ್ನು ಮಾಡಲಿದ್ದಾರೆ. ವಾರದಲ್ಲಿ ಯಾರೆಲ್ಲಾ ಯಾವ ಯಾವ ಮಿಸ್ಟೆಕ್ ಮಾಡಿದ್ದಾರೆ. ಯಾರು ಎಷ್ಟು ಅಗ್ರೆಸ್ಸಿವ್ ಆಗಿ ಆಟವಾಡಿದ್ದಾರೆ. ಎಂಬುದನ್ನೇಲ್ಲಾ ಗಮನಿಸಿರುವ ಕಿಚ್ಚು ಯಾರು ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಬಿಗ್‌ಬಾಸ್ ಮನೆಯ ಸ್ಪರ್ಧಿಗಳೆಲ್ಲರೂ ಸೇರಿ ವೈಲ್ಡ್‌ಕಾರ್ಡ್ ಎಂಟ್ರಿಯಾಗಿರುವ ರಜತ್‌ಗೆ ಕಳಪೆ ಪಟ್ಟವನ್ನು ಕಟ್ಟಿ ಜೈಲಿಗೆ ಕಳುಹಿಸಿದ್ದು, ಜೈಲಿನಲ್ಲಿದ್ದಕೊಂಡು ರಜತ್ ಯಾವ ರೀತಿ ಮಾತನಾಡಿದ್ದಾರೆ ಎಂಬ ಪ್ರೋಮೊ ಬಿಡುಗಡೆಯಾಗಿದೆ.
ಬಿಡುಗಡೆಯಾದ ವಿಡಿಯೋದಲ್ಲಿ ಎಲ್ಲಾ ಸ್ಪರ್ಧಿಗಳು ಚೆನ್ನಾಗಿ ಆಟವನ್ನಾಡಿದ್ದಾರೆ.ತನಗೆ ಕಳಪೆ ಪಟ್ಟವನ್ನು ಕೊಟ್ಟ ಸ್ಪರ್ಧಿಗಳ ಜೊತೆ ರೂಡಾಗಿ ಮಾತನಾಡಿದ ರಜತ್ ಕ್ಯಾಪ್ಟನ್ ಭವ್ಯಾ ತರಕಾರಿ ಕಟ್ ಮಾಡಲು ತಂದುಕೊಟ್ಟ ತರಕಾರಿಗಳನ್ನು ನಾನು ನನಗೆ ಇಷ್ಟ ಬಂದ ಹಾಗೆ ಕಟ್ ಮಾಡುತ್ತೇನೆ, ಎರಡು ಗಂಟೆ ಕಾಯಿರಿ, ಎಂದು ಹೇಳಿದ್ದಾರೆ. ಕಳಪೆ ಕೊಟ್ಟ ಬೇಸರದಲ್ಲಿರುವ ರಜತ್ ನನಗೆ ಕಳಪೆ ಕೋಡ್ತಾರೆ ಕಾಯಿರಿ,ನನಗೆ ಇಷ್ಟಬಂದಾಗ ತರಕಾರಿಗಳನ್ನು ಕಟ್ ಮಾಡುತ್ತೇನೆ.ಏನ್ ಮಾಡ್ತೀರಾ? ನಿಮ್ಮಿಂದ ಏನ್ ಮಾಡೋಕ್ಕೆ ಆಗುತ್ತೇ? ನಂಗೆ ಹೊಟ್ಟೆ ಉರಿತಾಯಿದೆ ಎನ್ನುವ ಮಾತನಾಡಿದ್ದಾರೆ.