ಪುರುಷರು ಲೈಂಗಿಕ ಸಂಭೋಗದಲ್ಲಿ ಬಲತ್ಕಾರ ಯಾಕೆ ಮಾಡಬಾರದೆಂಬ ಮನವರಿಕೆ ಮಾಡಿಕೊಳ್ಳುವ ಕಡೆ ನಾವು ಹೆಚ್ಚು ಗಮನಹರಿಸಬೇಕಿದೆ. ಅತ್ಯಾಚಾರ ಯಾಕೆ ಮಾಡಬಾರದು ಅಂತಾನೂ ಇಂದಿನ ದಿನಮಾನಗಳಲ್ಲಿ ಅದರಲ್ಲೂ ಯುವಪೀಳಿಗೆಗೆ, ಸಮಸ್ತ ಗಂಡು ಕುಲಕ್ಕೆ ಸಾರಿ ಸಾರಿ ಹೇಳುವ ಜರೂರತ್ತಿದೆ. ರೇಪ್ ಅನ್ನುವುದು ಸಾಮಾಜಿಕ ಕಂಟಕವಾಗಿ, ಹೆಣ್ತನವನ್ನು ಅವಮಾನಿಸುವ ಕ್ರಿಯೆಯೂ ಆಗಿದೆ. ಇದು ಉಂಟುಮಾಡುವ ಸಾಮಾಜಿಕ ಸಮಸ್ಯೆಗಳು ಹಲವಾದರೆ, ಸ್ವತಃ ಹೆಣ್ಣು ಅನುಭವಿಸುವ ನರಕಯಾತನೆಯ ಕುರಿತಾಗಿ ನಾವು ಯೋಚಿಸಬೇಕಾಗಿದೆ.
ಅಂದರೆ ಒಬ್ಬರಿಗೊಬ್ಬರು ಲೈಂಗಿಕತೆ ಕ್ರಿಯೆಯಲ್ಲಿರುವಾಗ ಅವರಿಗಿಬ್ಬರಿಗೂ (ಗಂಡು ಮತ್ತು ಹೆಣ್ಣು) ಇಷ್ಟವಿದ್ದರೆ, ಹೆಣ್ಣಿನ ಲಿಂಗ ಅಂದ್ರೆ ಯೋನಿ ಕಮಲದ ಹೂವಿನಂತೆ ಅರಳುತ್ತದೆ. ಆಗ ಗಂಡಿನ ಶಿಶ್ನ 2-3 ಇಂಚು ಉದ್ದ ಅಥವಾ ಎಷ್ಟೇ ದಪ್ಪವಿರಲಿ ಯೋನಿಯಲ್ಲಿ ಸೇರಿಸಿದಾಗ ಆ ಯೋನಿ ಕಮಲದ ಹೂವಿನಂತೆ ಅರಳುತ್ತದೆ ಆಗ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. (ಓದುಗರಿಗೆ ವಿಷಯದ ಸ್ಪಷ್ಟತೆ ಅರಿವಾಗಲಿ ಎಂಬ ಕಾರಣದಿಂದ ಇಲ್ಲಿ ಕಮಲ, ಅರಳುವುದು ಎಂಬ ಶಬ್ದಗಳನ್ನು ಬಳಸಲಾಗಿದೆ. ಯಾವುದೇ ವಿಕೃತಿಭಾವ ಇಲ್ಲಿ ಇಲ್ಲ. ಅರ್ಥೈಸುವ ಸಲುವಾಗಿಯಷ್ಟೇ ಈ ಪದಗಳನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ…)
ಆದರೆ ಅತ್ಯಾಚಾರ(ರೇಪ್) ಮಾಡುವಾಗ ಹೆಣ್ಣಿಗೆ ಇಷ್ಟವಿಲ್ಲದೇ ಇರುವಾಗ ಬಲಾತ್ಕಾರ ಮಾಡುತ್ತಾರೆ. ಅಂದ್ರೆ ಲೈಂಗಿಕತೆಯ ಇಷ್ಟವಿಲ್ಲದಾಗ, ಹೆಣ್ಣಿನ ಯೋನಿ ಮುದುಡಿಕೊಂಡಿರುತ್ತದೆ. ಅಂದರೆ ಕಿರುಬೆರಳು ಸಹ ಯೋನಿಯಲ್ಲಿ ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸೇರುವುದಿಲ್ಲ. ಆಗ ಗಂಡಿನ ಶಿಶ್ನದ ಗಾತ್ರ 2-3 ಇನ್ನೂ ಹೆಚ್ಚು ದಪ್ಪವಿರುವಾಗ ಅದ್ಹೇಗೆ ಯೋನಿಯಲ್ಲಿ ಸೇರುತ್ತದೆ? ಹಾಗಾಗಿ ಆಗ ಹೆಣ್ಣು ಜೀವಗಳು ತಾಪತ್ರಯಗಳ ನರಕದ ದೊಡ್ಡ ಹಿಂಸೆ ಅನುಭವಿಸಿ ಸಾಯುತ್ತವೆ, ಕಿರುಚಾಡುತ್ತವೆ. ಅಂತಹ ರಾಕ್ಷಸರು ಬಾಯಿಮುಚ್ಚಿ ಕಿರುಚಬೇಡೆಂದು ಉಸಿರುಗಟ್ಟಿಸಿ ಸಾಯಿಸಲು ಕೂಡ ಹೇಸದ ಪಾಪಿ, ವಿಕೃಷ್ಟ ಕಾಮಿಪಿಶಾಚಿಗಳು.
ಪತಿ-ಪತ್ನಿಯರ ವಿಷಯದಲ್ಲೂ ಅಷ್ಟೇ ಹೆಂಡತಿ ಬೇಡವೆಂದರೆ ಬೇಡ, ಎರಡೂ ಕಡೆ ಒಪ್ಪಿತವಾದಾಗಲೇ ಅದರಲ್ಲಿ ಮುಂದುವರೆಯಬೇಕು. ಇಲ್ಲದಿದ್ದರೆ ಅದು ಕೂಡ ಅತ್ಯಾಚಾರಕ್ಕೆ ಸಮವಾದಂತಾಗುತ್ತದೆ. ಅತ್ಯಾಚಾರಕ್ಕೆ ಒಳಗಾದವರು ಬಹುತೇಕ ಈ ಕಾರಣಕ್ಕೆ ಸಾಯುತಿರಲೂಬಹುದು.
ವಾಸ್ತವವಾಗಿ ಹೇಳಬೇಕಾದರೆ, ಅತ್ಯಾಚಾರಕ್ಕೆ ನಿಖರ ಕಾರಣಗಳು ಇಲ್ಲ. ಅದಾಗ್ಯೂ ಖ್ಯಾತ ಪತ್ರಕರ್ತೆ ದಿ. ಗೌರಿ ಲಂಕೇಶ್ ಸಂದರ್ಶನವೊಂದರಲ್ಲಿ ಈ ರೀತಿ ಹೇಳುತ್ತಾರೆ; ʻರೇಪ್ ಕ್ರೌರ್ಯದಿಂದ ಮಾಡಿದ್ದು, ಪ್ರೀತಿಯಿಂದಲ್ಲ. ಈ ಸಮಾಜ ರೇಪ್ ಮಾಡಿದವನ ಜೊತೆ ಬಾಳು, ಮದುವೆ ಆಗು ಅಂದರೆ ಆ ಕ್ರೌರ್ಯದ ವ್ಯಕ್ತಿ ಸಂತೋಷದಿಂದ ಅವಳನ್ನು ನೋಡಿಕೊಳ್ಳಲು ಅಸಾಧ್ಯ. ಯಾವುದೇ ಮಹಿಳೆಯ ದೇಹದ ಮೇಲೆ ನಮ್ಮ ಹಕ್ಕು ಇಲ್ಲ ಎಂದು ಪುರುಷರಲ್ಲಿ ಬಂದರೆ ಮಾತ್ರ ಈ ಸಮಾಜದಲ್ಲಿ ಅತ್ಯಾಚಾರಗಳು ನಿಲ್ಲುತ್ತವೆʼ ಎಂದು ಅವರು ಗಟ್ಟಿಯಾಗಿ ಹೇಳುತ್ತಾರೆ.
ನಮ್ಮ ವಾಟ್ಸಾಪ್ ಚಾನಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರ ಮೇಲೆ ಮತ್ತು ಬಾಲಕಿಯರ ಮೇಲೆ ಪುರುಷನ ದಬ್ಬಾಳಿಕೆ ಮತ್ತು ಆತನ ನೀಚತನದ ಪರಮಾವಧಿಗೆ ಹಿಡಿದ ಕೈಗನ್ನಡಿಯಂತೆ ಇಂದು ರಾಷ್ಟ್ರದ ದೆಹಲಿಯಿಂದಿಡಿದು, ದೇಶದ ಮೂಲೆಮೂಲೆಗಳಲ್ಲಿ ಎಲ್ಲೆಂದರಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ನಾಗರಿಕ ಪ್ರಪಂಚದಲ್ಲಿ ಇಂತಹ ಪ್ರಸಂಗಗಳು ತಲೆತಗ್ಗಿಸುವಂತಹವು. ರಾಜ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದೆಂದರೆ ಸರಕಾರ ಗಂಭೀರವಾಗಿ ಚಿಂತಿಸಿ, ಗಲ್ಲು ಶಿಕ್ಷೆಗೂ ಕಠಿಣವಾದ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕಿದೆ.
ಲೈಂಗಿಕತೆಯ ಬಗ್ಗೆ ಪಠ್ಯಗಳನ್ನು ಶಾಲಾ ದಿನಗಳಲ್ಲಿಯೇ ಅಳವಡಿಸಲೆಂಬ ಆಲೋಚನೆಯೊಂದಿಗೆ, ಲೈಂಗಿಕ ಶಿಕ್ಷಣವನ್ನು ಪ್ರೌಢಶಾಲೆಯಿಂದಾದರೂ ಶುರು ಮಾಡಬೇಕು. ಅದಕ್ಕಾಗಿ ಒಂದು ಪ್ರತ್ಯೇಕ ವಿಷಯವನ್ನು ಬೋಧನೆ ಮಾಡಬೇಕಿದೆ. ಹಾಗಾಗಿ ಚಿಂತಕರು, ಶಿಕ್ಷಣ ತಜ್ಞರು ಸಂಬಂಧಪಟ್ಟವರು ಗಮನಹರಿಸಿ ಸರಕಾರ ಲೈಂಗಿಕ ಪಠ್ಯವನ್ನು ರಚಿಸುವಂತಾಗಲಿ ಎಂಬ ಆಶಯದೊಂದಿಗೆ…!
- ಶಿವರಾಜ್ ಮೋತಿ
ಯುವ ಬರಹಗಾರ, ಧಾರವಾಡ