ಬಾಗಲಕೋಟೆ: ಭಾರತ ದೇಶಕ್ಕೆ ಮುಸ್ಲೀಂರ ಆಗಮಿಸಿದ್ದು ಯಾವಾಗ? ಮಂತ್ರಿಗಳಾಗಿ ಇವರಿಗೆ ಭಾರತದ ಚರಿತ್ರೆ ಗೊತ್ತಿಲ್ಲ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ವಿರುದ್ದ ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮುಸ್ಲೀಂ ರಾಜರು ಮಠ, ದೇವಸ್ಥಾನ , ಮಾನ್ಯಗಳಿಗೆ ಜಮೀನು ದಾನ ಮಾಡಿದ್ದರು ಸಚಿವ ಶಿವಾನಂದ ಪಾಟೀಲರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಸಲ್ಮಾನರನ್ನು ಒಳೈಸುವ ಕೆಲಸವನ್ನು ಜಮೀರ್‌ ಅಹ್ಮದ್‌ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಈಗ ನಿಮ್ಮ ಸರದಿ ನೀವು ಎರಡನೇ ಸ್ಥಾನದಲ್ಲಿದ್ದೀರಿ ಎಂದು ಶಿವಾನಂದ ಪಾಟೀಲರ ವಿರುದ್ದ ಕಿಡಿಕಾರಿದ್ದಾರೆ.

ಭಾರತ ದೇಶ ಸಾಧು ಸಂತನ ನಾಡಾಗಿದೆ. ಮುಸ್ಲೀಮರು ನಮ್ಮ ದೇಶದಲ್ಲಿರುವ ಸಂಪತ್ತನ್ನು ಕೊಳ್ಳೆಹೊಡೆದು ಆಕ್ರಮಣ ಮಾಡಲು ಬಂದವರು.ಈಲ್ಲಿನ ಆಸ್ತಿಯನ್ನು ಕೊಳ್ಳೆಹೊಡೆದು ಮಹಿಳೆ ಮಕ್ಕಳನ್ನು ಮಥಾಂತರ ಮಾಡಿ ಗೋವುಗಳನ್ನು ಕಡಿದು ರಾಜ್ಯಬಾರವನ್ನು ಮಾಡುತ್ತಿದ್ದರು. ಅವರೇನು ನಮಗೆ ದಾನವಾಗಿ ಕೊಟ್ಟಿಲ್ಲ ಬದಲಾಗಿ ದೋಚಿಕೊಂಡಿದ್ದಾರೆ ಎಂದು ಗುಡುಗಿದ್ದಾರೆ.

ನಮ್ಮ ಭೂಮಿಯನ್ನು ವಕ್ಫ್‌ ಹೆಸರಿನಲ್ಲಿ ಕಬಳಿಸಿರುವುದನ್ನು ಮರಳಿ ಪಡೆಯದೆ ಇರುವುದಿಲ್ಲ ನಮ್ಮ ಹಿಂದೂ ಸಮಾಜ.ಇದು ಸಾದ್ಯವಾಗದೇ ಇದ್ದರೆ ರಾಜ್ಯದಲ್ಲಿ ರಕ್ತಪಾತ ನಡೆಯುತ್ತದೆ.ನಮ್ಮ ಸಾಧುಸಂತರು ಸುಮ್ಮನೆ ಕಣ್ಮುಚ್ಚಿ ಕುಳಿತಿಲ್ಲ. ಮಠ, ದೇವಸ್ಥಾನ , ಮಾನ್ಯಗಳನ್ನ ವಶಪಡಿಸಿಕೊಳ್ಳಲು ವಕ್ಫ್‌ ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕ್ಫ್‌ ನೋಟಿಸ್‌ ಪಡೆದಿರುವ ವಿಷಯ ದೊಡ್ಡದಲ್ಲ. ಇದರಿಂದಾನೇ ಗೊತ್ತಾಗುತ್ತೆ ಕಾಂಗ್ರೆಸ್‌ ಸರ್ಕಾರ ಮಾಡಿರುವ ತಪ್ಪನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *