ಬೆಂಗಳೂರು: ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ ಎಂಬುದನ್ನು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ವಕ್ಫ್‌ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್‌ ಆಸ್ತಿಯಿತ್ತು. ಅದರಲ್ಲಿ ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ, ಇನಾಮ್ ರದ್ಧತಿ ಕಾಯ್ದೆಯಡಿ 1459 ಎಕರೆ 26 ಗುಂಟೆ ರೈತರಿಗೆ ಮಂಜೂರಾಗಿದೆ ಎಂದಿದ್ದಾರೆ.133 ಎಕರೆ 17 ಗುಂಟೆ ಬೇರೆ ಬೇರೆ ಯೋಜನೆಗಳಿಗೆ ಭೂ ಸ್ವಾಧೀನವಾಗಿ ಪರಿಹಾರ ನೀಡಲಾಗಿದೆ. ಈ ಮೂರು ವಿಭಾಗಗಳಲ್ಲಿ ಹಂಚಿಕೆಯಾಗಿರುವ ಭೂಮಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರಿಗೆ ಮಂಜೂರಾಗಿರುವ ಜಮೀನನ್ನು ವಾಪಸ್ ಪಡೆಯುವ ಉದ್ದೇಶವೂ ಸರಕಾರಕ್ಕಾಗಲಿ, ವಕ್ಫ್ ಸಚಿವರಿಗಾಗಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *