ನವದೆಹಲಿ: ಅಮೇರಿಕಾ ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿರುವ ಚುನಾವಣೆಯ ಫಲಿತಾಂಶ ಬಂದಿದ್ದು, ಡೊನಾಲ್ಡ್‌ ಟ್ರಂಪ್‌ ಬಹುಮತ ಗಳಿಸಿ ಜಯಭೇರಿಯನ್ನು ಬಾರಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ರವರ ರಿಪಬ್ಲಿಕನ್‌ ಪಕ್ಷವೂ 277 ಸ್ಥಾನಗಳನ್ನು ಗಳಿಸುವದರ ಮೂಲಕ ಹೆಚ್ಚು ಮತಗಳನ್ನು ಪಡೆದುಕೊಂಡಿದೆ.ಇನ್ನೂ ಹಾಲಿ ಉಪಾಧ್ಯಕ್ಷೆ ಡೆಮಾಕ್ರೆಟಿಕ್‌ ಪಾರ್ಟಿ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್‌ ಸೋಲನ್ನು ಅನುಭವಿಸಿದ್ದಾರೆ ಎನ್ನಲಾಗಿದೆ.

ಜನರಲ್ಲಿ ಹೆಚ್ಚು ಕೂತೂಹಲವನ್ನು ಉಂಟುಮಾಡಿದ್ದ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ರವರ ರಿಪಬ್ಲಿಕನ್‌ ಪಕ್ಷವೂ 277 ಸ್ಥಾನಗಳನ್ನು ಗಳಿಸಿದರೆ, ಡೆಮಾಕ್ರೆಟಿಸ್‌ ಪಾರ್ಟಿಯ ಕಮಲಾಹ್ಯಾರಿಸ್‌ 226 ಸ್ಥಾನಗಳನ್ನು ಪಡೆದುಕೊಂಡಿದೆ.

ಗೆಲುವಿನ ಜಯಭೇರಿ ಬಾರಿಸಿದ ಡೊನಾಲ್ಡ್  ಟ್ರಂಪ್, ಇತಿಹಾಸವನ್ನು ಮತ್ತೆ ಮರುಸೃಷ್ಠಿಸಿದ್ದೇವೆ ಎಂದಿರುವ ಇವರನ್ನು ಮುಂದಿನ ಅಧ್ಯಕ್ಷ ಎಂದು ಶ್ವೇತಭವನ ಘೋಷಣೆ ಮಾಡಿದ್ದು,  ಒಂಬರುವ 2025 ಜನವರಿ 20ನೇ ತಾರೀಖಿನಂದು ಹೊಸ ಅಧ್ಯಕ್ಷರ ಪ್ರಮಾಣ ವಚನದ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾಹಿತಿ ದೊರೆತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *