ಬಿಗ್‌ಬಾಸ್‌ ಸೀಸನ್‌ 11 ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದ್ದು ಸ್ಪರ್ಧಿಗಳ ನಡುವೆಯೇ ಸ್ಪರ್ಧೆಗಳು ಶುರುವಾಗಿವೆ.ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರೂ ಎಲ್ಲರ ಜೊತೆ ಚೆನ್ನಾಗಿ ಮಾತಾಡ್ತಾರೆ ನಂತರ ಅವರು ಇಲ್ಲದಿದ್ದಾಗ ಅವರ ಬಗ್ಗೆ ಮಾತನಾಡುವುದು ಈ ರೀತಿಯ ವಾತವರಣವಿದೆ.ಇಲ್ಲಿ ಯಾರು ಯಾರಿಗೆ ಸ್ನೇಹಿತರು, ಯಾರ್‌ ಯಾರಿಗೆ ದುಷ್ಮನ್‌ಗಳು ಎಂಬುದೇ ತಿಳಿಯುದ ಗೊಂದಲಲ್ಲಿದ್ದಾರೆ ಎಲ್ಲರು.

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಮಾತನಾಡಿರುವ ಕ್ಲೀಪ್‌ಗಳನ್ನು ಮನೆಯವ್ರ ಮುಂದೆ ಪ್ರಸಾರ ಮಾಡಿತ್ತು. ಈ ವಿಡಿಯೋ ನೋಡಿದವರೆಲ್ಲರೂ ಶಾಕ್‌ ಆಗಿದೆ.ಗೋಮುಖ ವ್ಯಾಘ್ರ ಎನ್ನುವ ಪದಕ್ಕೆ, ಆಟಕ್ಕೆ ಈಗೊಂದು ಹೊಸ ತಿರುವು ಸಿಕ್ಕಿದೆ ಎನ್ನಲಾಗಿದೆ.

ಮೊದಲು ಪ್ಲೇ ಆದ ವಿಡಿಯೋದಲ್ಲಿ ಮೊದಲಿಗೆ ಶಿಶಿರ್‌ ಅವರ ಹತ್ತಿರ ಐಶ್ವರ್ಯಾರವರು ಕಿರುತೆರೆ ನಟಿ ಭವ್ಯರವರ ಬಗ್ಗೆ ಚರ್ಚೆಮಾಡ್ತೀದ್ದಾರೆ. ಆ ವಿಡಿಯೋದಲ್ಲಿ ಐಶ್ವರ್ಯ ಮಾತನಾಡಿದ ಮಾತುಗಳನ್ನು ನೋಡಿದ್ರೆ ತಿಳಿಯುತ್ತೆ ಭವ್ಯ ಮೇಲೆ ಎಷ್ಟು ಹೊಟ್ಟೆಕಿಚ್ಚು ಎನ್ನುವುದನ್ನು ನೋಡಿದ ಮನಯವರೆಲ್ಲರ ಮನಸ್ಸಲ್ಲಿ ಆತಂಕವನ್ನು ಉಂಟುಮಾಡಿದೆ ಎನ್ನಲಾಗಿದೆ.ಮನಯವರೆಲ್ಲರ ಅಸಲಿಯತ್ತನನು ನೋಡಿದ ಹನುಮಂತ ಅಲರ್ಟ್‌ ಆಗಿದ್ದಾನೆ.

ಇನ್ನು ತ್ರಿವಿಕ್ರಮ್‌ ಮಾತನಾಡಿರುವ ವಿಡಿಯೋದಲ್ಲಿ ಭವ್ಯ ಮಾನಸಾ,ಅವರ ಬಳಿ ತ್ರಿವಿಕ್ರಮ್‌ ಅವರು ಉಗ್ರಂ ಮಂಜು ಅವರ ತಂಡದಲ್ಲಿ ಒಂದು ಹಕ್ಕಿ ಹೊಡೆದ್ರೆ 2 ಹಕ್ಕಿ ಪ್ರೀಯಾಗಿ ಸಿಗ್ತವೆ .ಮತ್ತೊಂದು ಹಕ್ಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವ್ಯಂಗ್ಯಮಾಡಿದ್ದಾರೆ.

ಎರಡು ಹಕ್ಕಿಗಳು ಎಂದು ಹೇಳಿರುವ ತ್ರಿವಿಕ್ರಮ್‌ ಮಾತಿಗೆನಿಂದ ಬಿಗ್‌ ಬಾಸ್‌ ಮನೆಯಲ್ಲಿ ಮತ್ತಷ್ಟು ಕಿಚ್ಚು ಹಚ್ಚದ ಹಗೆ ಆಗಿದೆ. ಹಕ್ಕಿಗಳು ಎನ್ನುವ ಮಾತು  ಮೋಕ್ಷಿತಾ ಅವರಿಗೆ ಸಹಿಸಲಾಗದೆ ಉಗ್ರ ರೂಪ ತಾಳಿದ್ದಾರೆ.ಅಕ್ಕ-ತಂಗಿಯರ ಜೊತೆಹುಟ್ಟಿದವರು ಯಾರಾದ್ರೂ ಹಕ್ಕಿ ಎಂದು ಮಾತಾಡ್ತಾರಾ? ಈ ಮಾತಿನಿಂದಲೇ ತಿಳಿಯುತ್ತೆ ಅವರ ಯೋಗ್ಯತೆ ಏನೆಂದು. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ ಅದು ಇದೇ ಇರಬೇಕು. ಗೋಮುಖವ್ಯಾಘ್ರ ಎಂದಿರುವುದಕ್ಕೆ ನಾನು ಪಶ್ಚಾತಾಪ ಪಡುವುದಿಲ್ಲವೆಂದು ಮೋಕ್ಷಿತಾ ಸವಾಲನ್ನು ಹಾಕಿದ್ದಾರೆ .

ಬಿಗ್‌ಬಾಸ್‌ ಮನೆಯ ಸ್ಪರ್ಧಿ ಮೋಕ್ಷಿತಾರವರ ಸವಾಲನ್ನು ಸ್ವಿಕರಿಸಿದ ತ್ರಿವಿಕ್ರಮ್‌ , ಎಲ್ಲಿ ಬಿಟ್ಟೆ ಹೂಳನಾ ಎಂದು ಒನ್‌ ಡು, ತ್ರಿ ಕೌಂಟ್‌ ಮಾಡುತ್ತಾ, ಗೋಮುಖ ವ್ಯಾಘ್ರಕ್ಕಿಂತ ದೊಡ್ಡದು ಏನಾದ್ರೂ ಇದ್ರೆ ಹೇಳಿ ಅಕ್ಕ ಎಂದಿದ್ದಾರೆ. ಇಷ್ಟು ದಿನದವರೆಗೆ ಇದ್ದ ಹಾಗೇ ಇನ್ನು ಮುಂದೆನೂ ಇದ್ದು, ನನ್ನ ಹೊಸ ಆಟ ಶುರುಮಾಡ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *