ಬೆಂಗಳೂರು:ನಟ, ಅಭಿನಯ ಚಕ್ರವರ್ತಿ ಎಂದೇ ಹೆಸರುವಾಸಿಯಾಗಿರುವ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆಅಭಿಮಾನಿಗಳು. ತಮ್ಮ ನೆಚ್ಚಿನ ಹೀರೊ ಬರ್ತಡೆಯನ್ನು ಆಚರಿಸಲು ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಜಮಾಯಿಸಿದ್ದು ಬರ್ತ್ ಡೇ ಕೇಕ್ ಕಟ್ ಮಾಡಿ ಸಂತಸದಿಂದ ಕುಣಿದಾಡಿದ್ದಾರೆ.
ಇದೇ ವೇಳೆ ತಮ್ಮ ಅಭಿಮಾನಿಗಳನ್ನು ಕುರಿತು ಮಾತಾಡಿದ ಕಿಚ್ಚ ಅಭಿಮಾನಿಗಳ ಅಭಿಮಾನದಿಂದ ನಾನು ಇಷ್ಟು ಎತ್ತರಕ್ಕೆ ಏರಿದ್ದೇನೆ, ಅವರಿಂದಲೇ ಇಷ್ಟೇಲ್ಲಾ ಸಾಧನೆ ಮಾಡಲು ಸಾದ್ಯವಾಯಿತು. ನನ್ನ ಅಭಿಮಾನಿಗಳು ನಮ್ಮ ಪ್ರತಿಬಿಂಬ. “ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ”. ನನ್ನ ಅಭಿಮಾನಿಗಳಿಗೆ ಕಳಂಕವನ್ನ ತರುವ ಕೆಲಸವನ್ನ ನಾನೆಂದಿಗೂ ಮಾಡುವುದಿಲ್ಲ. ಬರೀ ಸಿನಿಮಾದಲ್ಲಿ ನಟನೆ ಮಾಡೋದ್ರಿಂದ ನಾಯಕ ಆಗೋಕೆ ಸಾಧ್ಯವಿಲ್ಲ. ವ್ಯಕ್ತಿಯೂ ತನ್ನ ವ್ಯಕ್ತಿತ್ವದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ ಎಂದು ಹೇಳಿದ್ದಾರೆ.