ಮನುಷ್ಯನು ಈಗೀನ ಆದುನಿಕ ಜೀವನ ಶೈಲಿಯಿಂದ ತಮ್ಮ ದಿನಚರಿಯನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿರುತ್ತಾನೆ. ಇದರಿಂದ ಯಾವ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಅವನು ಯೋಚನೆ ಕೂಡಾ ಮಾಡಿರುವುದಿಲ್ಲ ಯಾಕೆಂದರೆ ಕೆಲವು ಸೂಕ್ಷ್ಮಗಳು ಯೋಚನೆಗಳಿಗೆ ನಿಲುಕದ್ದಾಗಿರುತ್ತದೆ.

ಒಬ್ಬ ಮನುಷ್ಯ ಆರೋಗ್ಯವಾಗಿರಲು ಮುಖ್ಯವಾದ ಬೇಸಿಕ್‌ ನೀಡ್ಸ್‌ಗಳು ಯಾವುವೆಂದರೆ ನೀರು, ಊಟ, ನಿದ್ದೆ, ಇವು ಮೂರುಗಳು ಸರಿಯಾಗಿದ್ದರೆ ತಕ್ಕಮಟ್ಟಿಗೆ ಎಲ್ಲವೂ ಸರಿಯಾಗಿರುತ್ತದೆ ಎನ್ನಬಹುದು.ಈ ಮೂರರಲ್ಲಿ ಯಾವುದಾದರೂ ಕಡಿಮೆಯಾದರೂ ಅಥವಾ ಹೆಚ್ಚಾದರೂ ಕಷ್ಟಪಡಬೇಕಾಗುತ್ತದೆ.

ಮೊದಲಿಗೆ ನಿದ್ದೆ ಯಾಕೆ ಬೇಕು ಮತ್ತು ಯಾಕೆ ಬೇಡ? ಮತ್ತು ಎಷ್ಟು ನಿದ್ದೆ ಮಾಡಿದರೆ ಒಳಿತು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೊಣ.

ಮೊದಲೆಲ್ಲಾ ಒಬ್ಬ ಮನುಷು ಕನಿಷ್ಟವೆಂದರೂ 8 ಗಂಟೆಗಳ ಕಾಲ ನಿದ್ದೆ ಮಾಡಲೇ ಬೇಕು ಎಂದು ವೈದ್ಯರು ಹೇಳುತ್ತಿದ್ದರು. ಆದರೀಗ 8ಗಂಟೆ ನಿದ್ದೆ ಮಾಡಿದರೆ ಓದುವುದು ಪೆಂಡಿಂಗ್‌ ಆಗಿ ಉಳಿದುಬಿಡುತ್ತದೆ ಎಂದು ವಿದ್ಯಾರ್ಥಿಗಳು ಯೋಚಿಸಿದರೆ, ನಮ್ಮ ತಾಯಂದಿರು ಅಯ್ಯೋ ಮಕ್ಕಳು ಶಾಲೆಗೆ ಹೊರಡುವ ಮುನ್ನ ಬಾಕ್ಸ್‌ ರೆಡಿಮಾಡಬೇಕು. ಗಂಡ ಕೆಲಸಕ್ಕೆ ಹೊರಡುವ ಮುನ್ನ ಅವರಿಗೆ ಅಡಿಗೆ ಮಾಡಬೇಕು ಎಂದು ಬೆಳಗಿನ ಜಾವ 5 ಗಂಟೆಗೆ ಎದ್ದು ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳು, ಮತ್ತು ಮನೆಯವರಿಗೆ ಪ್ರಿಯವಾಗುವ ಅಡುಗೆಯನ್ನು ಮಾಡಿ. ಕಿಚನ್‌ ಕ್ಲೀನ್‌ ಮಾಡಿಕೊಂಡು, ಆಚೆ ಕಸಗುಡಿಸಿ, ಬಾಗಿಲು ತೊಳೆದು ರಂಗೋಲಿ ಹಾಕಿ ಒಂದ್‌ ಕಫ್‌ ಕಾಫಿ ಕುಡಿಯುವಷ್ಟರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರು ಮಅಡುವ ಕೆಲಸದ ಸಮಯವಾಗೇ ಬಿಡುತ್ತದೆ.

ಅಯ್ಯೋ ಇಷ್ಟು ಬೇಗ ಟೈಮ್‌ ಆಗೋಯ್ತಲ್ಲ ಮಕ್ಕಳನ್ನು ರೆಡಿಮಾಡಿ ಕಳಿಸಿ, ಎಲ್ಲರಿಗೂ ಟಿಫನ್‌ ಕೊಟ್ಟು ನಂತರ ಕಾಫಿ ಕುಡಿಯೋಣ ಎಂದುಕೊಂಡರೆ, ಪಾತ್ರೆ ತೋಳೆಯುವುದು, ಕಸಗುಡಿಸಿ ಒರೆಸುವುದು, ಬಟ್ಟೆ ಒಗೆದು ಸ್ನಾನ ಮಾಡಿ ತಿಂಡಿ ತಿನ್ನುವಷ್ಟರಲ್ಲಿ ಊಟದ ಸಮಯವೇ ಆಗಿರುತ್ತದೆ.

ನಾಸ್ಟ ಮತ್ತು ಊಟವನ್ನು ಒಟ್ಟಿಗೆ ಮಾಡಿದಂತಾಗುತ್ತದೆ. ನಂತರ ಮಕ್ಕಳು ಬರುವಷ್ಟರಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೊಣವೆಂದು ತಲೆ ನೆಲಕ್ಕೆ ಹಾಕಿದರೆ ಯಾವಾಗ ನಿದ್ದೆಗೆ ಜಾರಿರುತ್ತೇವೊ ತಿಳಿಯುವುದಿಲ್ಲ. ಅಯ್ಯೋ ಕೆಲವೊಬ್ಬರಿಗೆ ತಲೆ ನೆಲಕ್ಕೆ ಹಾಕಿದರೆ ನಿದ್ದೆ ಬಂದುಬಿಡುತ್ತೆ ಆದರೆ ನಾನು ಕಣ್ಣು ಮುಚ್ಚಿಕೊಂಡ್ರೂ ನಿದ್ದೆ ಬರೋದೆ ಇಲ್ಲವೆಂದು ಕೆಲವರು ಹೇಳ್ತಾರೆ ಆದರೆ ಅವರಿಗೇನು ಗೊತ್ತು ನಿದ್ದೆ 8 ಗಂಟೆಗಳ ಕಾಲ ನಿದ್ದೆ ಮಾಡುವುದನ್ನು ಮೊಟುಕುಗೊಳಿಸಿರುವ ಕಾರಣ ಬೇಗ ನಿದ್ದೆಗೆ ಜಾರುತ್ತಾರೆ ಎಂದು.

ನಿದ್ದೆಯನ್ನು ಸ್ಕೀಪ್‌ ಮಾಡಿ ಕೆಲಸ ಮಾಡುವುದರಿಂದ ದೇಹವೂ ಜರ್ಜರಿತವಾಗಿರುತ್ತದೆ ಆದ್ರಿಂದ ಆ ನಿದ್ದೆಯನ್ನು ಬ್ಯಾಲೆನ್ಸ್‌ ಮಾಡಲು ಅತಿ ಬೇಗ ನಿದ್ರೆಗೆ ಜಾರುತ್ತಾರೆ.ಈ ರೀತಿ ಬಹುಬೇಗ ನಿದ್ರೆಗೆ ಜಾರುವುದನ್ನು ಸ್ಲೀಪ್‌ ಡಿಸಾರ್ಡರ್‌ ಎಂದು ಕರೆಯುತ್ತಾರೆ.

ಸರಿಯಾಗಿ ನಿದ್ದೆ ಮಾಡುವುದರಿಂದ ಖಿನ್ನತೆ, ಬಿಪಿ,ಶುಗರ್‌, ಬೊಜ್ಜು, ಹಾರ್ಟ್‌ಗೆ ಸಂಬಂಧಿಸಿದಂತಹ ಖಾಯಿಲೆಗಳಿಂದ ದೂರವಿರಬುದೆಂದು ಹೇಳಬಹುದು.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಧುನಿಕ ಶೈಲಿಯ ಕೆಲವು ಅಭ್ಯಾಸಗಳನ್ನು ತೊರೆದರೆ ನಮ್ಮ ಜೀವನ ಶೈಲಿ ಉತ್ತಮವಾಗಿರುತ್ತದೆ .

Leave a Reply

Your email address will not be published. Required fields are marked *