ನಾವು ಸುಂದರವಾಗಿ ನಕ್ಕಾಗ ದಾಳಿಂಬೆ ಕಾಳಿನಂತೆ ಕಾಣುವುದು ನಮ್ಮ ಶುಚಿಯಾದ, ಶುಭ್ರವಾದ ಹಲ್ಲುಗಳು. ಹಲ್ಲುಗಳ ಸಂರಕ್ಷಣೆಯನ್ನು ಮಾಡದಿದ್ದರೆ ಹಲ್ಲುನೋವಿನಂತಹಾ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ನಮ್ಮಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹಲ್ಲುಜ್ಜುವ (ಕ್ರಮವಿರುತ್ತದೆ) ಅಭ್ಯಾಸವಿರುತ್ತದೆ.
ಹಳ್ಳಿಯವರಾದರೆ ಹಲ್ಲುಜ್ಜಲು ಸಾಮಾನ್ಯವಾಗಿ ಕಲ್ಲುಪುಡಿ, ಇಜ್ಜಿಲು,ಬೇವಿನಕಡ್ಡಿ, ಇತ್ಯಾದಿಗಳನ್ನು ಬಳಸುತ್ತಿದ್ದರು ಆದರೀಗ ಕಾಲ ಬದಲಾಗಿದೆ. ಹಳ್ಳಿಯವರು, ಸಿಟಿಯವರು ಎನ್ನುವ ಬೇದಭಾವವಿಲ್ಲದೆ ಎಲ್ಲರೂ ಮಾರಕಟ್ಟೆಗಳಲ್ಲಿ ಸಿಗುವಂತಹ ಪೇಸ್ಟ್ ಮತ್ತು ಬ್ರೆಷ್‌ಗಳನ್ನು ಬಳಸಿ ತಮ್ಮ ಹಲ್ಲುಗಳನ್ನು ಸ್ವಚ್ಚ ಮಾಡಿಕೊಂಡು ತಮ್ಮ ಹಲ್ಲುಗಳ ಸ್ವಚ್ಚತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ.
ಸಮಯದ ಅಭಾವದಿಂದ ಸರಿಯಾಗಿ ಹಲ್ಲುಉಜ್ಜದಿದ್ದರೆ ಹಲ್ಲಿನ ನಡುವೆ ಸಿಲುಕಿಕೊಂಡಿರುವ ಆಹಾರದ ಕಣಗಳು ಕೊಳೆತು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಹಲ್ಲುಗಳ ನಡುವೆ ಹುಳುಕು, ವಸಡಿನ ಊತ, ಇನ್ನೂ ಮುಂತಾದ ಬಾಯಿಯ ಸಮ್ಯೆಗಳು ಉಲ್ಪಣವಾಗುತ್ತವೆ, ಆದ್ದರಿಂದ ಹಲ್ಲುಗಳನ್ನು ಒಂದೊಳ್ಳೆ ಪೇಸ್ಟ್ ಹಾಕಿ ಸ್ವಚ್ಚಮಾಡಬೇಕು.
ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಉದಾ: ಕೊಬ್ಬರಿ ಎಣ್ಣೆ, ಹರಿಶಿಣ, ಸೋಡಾ,ಒಂದೆರಡು ನಿಂಬೆರಸದ ಹನಿಯನ್ನು ಹಾಕಿ ಉಜ್ಜಿದರೆ ಹಲ್ಲು ಬೆಳ್ಳಗಾಗುವುದಲ್ಲದೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.
ಕನಿಷ್ಠ ಎರಡರಿಂದ ಮೂರು ಅಥವಾ ಐದು ನಿಮಿಷವಾದರೂ ಹಲ್ಲುಜ್ಜಿದರೆ ಸಂಪೂರ್ಣ ವಾಗಿ ಸ್ವಚ್ಚವಾಗುತ್ತದೆ.
ಉಪ್ಪು ನೀರಿನಿಂದ ಗಾಗಲ್ ಮಾಡಿದರೆ ಬಾಯಿಯಲ್ಲಿರುವ ಕೀಟಾಣುಗಳು ನಾಶವಾಗಿ ನೋವು ಕಡಿಮೆಯಾಗುತ್ತದೆ.
ನಮಗೆ ಹಲ್ಲಿನ ಸಮಸ್ಯೆಯಿದೆ ಎಂದರೆ ಮೊದಲಿಗೆ ನೆನಪು ಬರುವುದೇ ಲವಂಗ, ಈ ಲವಂಗವನ್ನು ನೋವಿರುವ ಜಾಗದಲ್ಲಿಟ್ಟರೆ ಕ್ರಮೇಣ ಕಮ್ಮಿಯಾಗುತ್ತದೆ.
ಇನ್ನೂ ನಾರಿನಂಶವಿರುವ ಆಹಾರಗಳನ್ನು ಯಥೇಚ್ಚವಾಗಿ ಸೇವಿಸಬೇಕು. ಹಸಿಯಾಗಿ ತಿನ್ನುವಂತಹ ಸೇಬು, ಸೌತೆಕಾಯಿ , ಕಬ್ಬು.ಈ ರೀತಿಯ ಹಣ್ಣುಗಳನ್ನು ಸೇವಿಸಿದರೆ ಹಲ್ಲುಗಳಿಗೆ ಬೇಕಾದ ಅಂಶಗಳು ನೇರವಾಗಿ ತಲುಪುತ್ತವೆ.
ದೂರವಿರಬೇಕಾದ ಆಹಾರ ಪದಾರ್ಥಗಳು
ಸಕ್ಕರೆ ಅಂಶವಿರುವ ಯಾವುದೇ ರೀತಿಯ ಸಿಹಿ ಪದಾರ್ಥಗಳಿಂದ ಆದಷ್ಟು ದೂರವಿರುವುದೇ ಒಳ್ಳೆಯದು.
ತಂಪುಪಾನೀಯ, ಅತಿ ಬಿಸಿ ಪಾನೀಯಗಳಿಂದ ಕೊಂಚ ಅಂತರ ಕಾಪಾಡಿಕೊಳ್ಳಿ
ನಮ್ಮ ಹಲ್ಲುಗಳಿಗೂ ನಾವು ಸೇವಿಸುವ ಆಹಾರಕ್ಕೂ ಸಂಬಂಧವಿದೆ ಆದ್ದರಿಂದ ಆರೋಗ್ಯಕ್ಕೆ ಹಾನಿಯಾಗುವ ಆಹಾರ ಪದಾರ್ಥಗಳನ್ನು ಸೇವಿಸುವುದಿರುವುದೇ ಒಳ್ಳೆಯದು.