ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮದಲ್ಲಿ ಬಹುಭಾಷಾನಟ ಪ್ರಕಾಶ್‌ರಾಜ್ ಡಿಸಿಎಂ ಉದಯನಿಧಿ ಸ್ಟಾಲಿನ್ ಪಕ್ಕದಲ್ಲಿ ಕುಳಿತಿರುವ ಪೋಟೋವನ್ನು ಹಂಚಿಕೊಂಡಿರುವ ಪ್ರಕಾಶ್‌ರಾಜ್ ವಿರುದ್ದ ತಮಿಳು ಸಿನಿಮಾ ನಿರ್ಮಾಪಕರು ಗಂಭೀರ ಆರೋಪ ಮಾಡಿರುವುದು ತಿಳಿದುಬಂದಿದೆ.
ಡಿಸಿಎಂ ಉದಯನಿಧಿ ಸ್ಟಾಲಿನ್ ಜೊತೆಯಲ್ಲಿದ್ದೇನೆ ಎಂದು ಪೋಸ್ಟ್ ಹಾಕಿರುವ ಪ್ರಕಾಶ್‌ರಾಜ್‌ರವರಿಗೆ ತಿರುಗೇಟು ನೀಡಿರುವ ನಿರ್ಮಾಪಕ ವಿನೋದ್ ಕುಮಾರ್ , ಸ್ಟಾಲಿನ್ ಚುನಾವಣೆಯಲ್ಲಿ ಗೆಲುವನ್ನು ಪಡೆದಿದ್ದಾರೆ.ಆದರೆ ನೀವು ಸೋತಿದ್ದೀರಾ?ಇದೇ ವ್ಯತ್ಯಾಸ ಎಂದಿರುವ ಅವರು ನಿಮ್ಮ ಕಾರಣದಿಂದ ಶೂಟಿಂಗ್ ಸ್ಟಾಪ್ ಆದ ಕಾರಣ ಕೋಟಿ ಕೋಟಿ ನಷ್ಟವಾಗಿದೆ.ಯಅರಿಗೂ ಹೇಳದೆ, ಕೇಳದೆ, ಕ್ಯಾರವಾನ್‌ಗೆ ಹೋದ ನೀವು ಕರೆ ಮಾಡ್ತೇನೆ ಎಂದು ಹೇಳಿ ಹೋದ ನೀವು ಒಂದು ಪೋನ್ ಕಾಲ್ ಮಾಡಿಲ್ಲವೆಂದು ಆರೋಪ ಮಾಡಿದ್ದಾರೆ.
ಪ್ರಕಾಶ್ ರಾಜ್‌ರವರನ್ನು ಈಗಾಗಲೇ ತಮಿಳು ಚಿತ್ರರಂಗ ಬ್ಯಾನ್ ಮಾಡಿತ್ತು. ಸಿನಿಮಾ ಶೂಟಿಂಗ್‌ಗೆ ಸೂಕ್ತ ಸಮಯಕ್ಕೆ ಹಾಜರಾಗುವುದಿಲ್ಲ. ಕೊಟ್ಟಿರುವ ಡೇಟ್ಸ್ಗೆ ಕರೆಕ್ಟ್ ಅಗಿ ಬರುವುದಿಲ್ಲವೆಂದು ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು.ಆದ್ದರಿಂದ ಇವರನ್ನು ದೂರವಿಡಲಾಗಿತ್ತು ಎನ್ನಲಾಗಿದೆ.