ಬೆಂಗಳೂರು: ನವೆಂಬರ್‌ 13ರಂದು ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಲು ಜೆಡಿಎಸ್‌ ಪಕ್ಷವೂ ಸ್ಟಾರ್‌ ಪ್ರಚಾರಕರ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ.

ಜೆಡಿಎಸ್‌ 40 ಜನರಿರುವ ಸ್ಟಾರ್ ಪ್ರಚಾರಕ ಪಟ್ಟಿಯನ್ನುಬಿಡುಗಡೆ ಮಾಡಿದ್ದು,  ಚುನಾವಣಾ ಆಯೋಗಕ್ಕೆ ಪಟ್ಟಿಯನ್ನು ರವಾನಿಸಿದ್ದಾರೆ. ಆದರೆ ಈ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿಯೂ ಅಧ್ಯಕ್ಷ ಜಿ.ಟಿ ದೇವೇಗೌಡರವರಿಗೆ ಕೋಕ್ ನೀಡಿರುವ ವಿಷಯ ತಿಳಿದುಬಂದಿದೆ.

ಇತ್ತೀಚೆಗೆ ಮುಡಾ ಹಗರಣದ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಿ.ಟಿ ದೇವೇಗೌಡರು ದಸರಾ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿಯವರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ ಎನ್ನುವ ಕಾರಣಕ್ಕ ಅವರ ಹೆಸರನ್ನು  ಕೈಬಿಡಲಾಗಿದೆ.ಮತ್ತು ಜೆಡಿಎಸ್‌ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದರು ಎನ್ನುವ ಕಾರಣಕ್ಕೆ ಅವರ ಹೆಸರನ್ನು ಸ್ಟಾರ್‌ ಪ್ರಚಾರಕರ ಪಟ್ಟಿಗೆ ಸೇರ್ಪಡೆ ಮಾಡಲಿಲ್ಲವೆಂಬ ಮಾಹಿತಿಯನ್ನು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಪ್ರಮುಖ ಸ್ಟಾರ್ ಪ್ರಚಾರಕರು ಪಟ್ಟಿ ಹೀಗಿದೆ:
ದೇವೇಗೌಡ – ರಾಷ್ಟ್ರೀಯ ಅಧ್ಯಕ್ಷ
ಕುಮಾರಸ್ವಾಮಿ – ಕೇಂದ್ರ ಸಚಿವ, ರಾಜ್ಯಾಧ್ಯಕ್ಷ.
ಸುರೇಶ್ ಬಾಬು – ಶಾಸಕಾಂಗ ನಾಯಕ
ಅನಿತಾ ಕುಮಾರಸ್ವಾಮಿ – ಮಾಜಿ ಶಾಸಕಿ.
ಸಾ.ರಾ. ಮಹೇಶ್- ಮಾಜಿ ಸಚಿವ
ಪುಟ್ಟರಾಜು – ಮಾಜಿ ಸಚಿವ
ಹರೀಶ್ ಗೌಡ – ಶಾಸಕ, ಜಟಿಡಿ ಪುತ್ರ
ಮಲ್ಲೇಶ್ ಬಾಬು – ಸಂಸದ 

Leave a Reply

Your email address will not be published. Required fields are marked *