ಬೆಂಗಳೂರು: ಕೇಂದ್ರ ಸಚಿವರಾದ ವಿ.ಸೋಮಣ್ಣನವರು ಬೆಂಗಳೂರಿನ ಯಲಹಂಕದಲ್ಲಿರುವ ಅಚ್ಚು ಮತ್ತು ಗಾಲಿ ಕಾರ್ಖಾನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಕನ್ನಡ ಭಾಷೆಯನ್ನುಮಾತನಾಡದೆ ಹಿಂದಿಯಲ್ಲಿ ಮಾತನಾಡಿದ್ದನ್ನು ಗಮನಿಸಿದ ಶಾಸಕರು ಕನ್ನಡ ಭಾಷೆಯನ್ನುಮಾತನಾಡದೆ ಇರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾವೆಲ್ಲರೂ ಹಿಂದಿಯನ್ನು ಕಲಿತುಕೊಂಡು ಮಾತನಾಡುತ್ತೇವೆ ಆದರೆ ಇಲ್ಲಿನ ಭಾಷೆಯನ್ನು ನೀವ್ಯಾಕೆ ಮಾತನಾಡುವುದಿಲ್ಲ. ಜನರ ಜೊತೆ ಹೇಗೆ ಸಂಭಾಷಣೆ ನಡೆಸುತ್ತೀರಿ. ಜನರು ಕೇಳುವುದು ಒಂದಾದರೆ ನೀವು ಹೇಳುವುದು ಒಂದಾಗಿರುತ್ತದೆ.ಹೀಗಾದರೆ ಹೇಗೆ ಎಂದು ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.