ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ನಾಲ್ಕನೇ ವಾರವನ್ನು ಮುಗಿಸಿ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಜಾನಪದ ಗಾಯಕ ಹನುಮಂತ ತಮ್ಮ ಪ್ರಾಮಾಣಿಕತನದಿಂದ ಆಟವಾಡುತ್ತಾ ಜನರ ಮನಸ್ಸನ್ನು ಗೆದ್ದಿದ್ದಾರೆ.
ಜಾನಪದ ಗಾಯಕ ಹನುಮಂತ ಬಿಗ್‌ಬಾಸ್ ಮನೆಯಿಂದ ಹೋರ ಹೋದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟಡುತ್ತೇನೆಂದು ಸಹ ಸ್ಪರ್ಧಿ ಗೌತಮಿ ಬಳಿ ಹಂಚಿಕೊಂಡಿದ್ದಾರೆ.ಹ್ಞಂ ಮದುವೆ ಆಗ್ತೀರಾ? ಎಂದು ಹೇಳಿದಗ ಹೌದು ಬಿಗ್‌ಬಾಸ್ ಸೀಸನ್ 11 ಮುಗಿಸಿಕೊಂಡು ಮನೆಗೆ ಹೋದ ಕೂಡಲೇ ಮದುವೆ ಆಗುತ್ತೇನೆ.ಹುಡುಗಿ ಇದ್ದಾಲೆ ಎಂದು ಹೇಳಿದ್ದಾರೆ.ಅದನ್ನು ಕೇಳಿದ ಗೌತಮಿ ನಿಮ್ಮ ಹುಡುಗಿ ಹೆಸರೇನು? ಎಂದು ಪ್ರಶ್ನಿಸಿದ್ದಾರೆ.ನಿಮ್ಮ ಹುಡುಗಿಯ ಬಗ್ಗೆ ಒಂದು ಹಾಡು ಹಡಿ ಎಂದು ಕೇಳಿಕೊಂಡಿದ್ದಾರೆ.ಅದಾದ ನಂತರ ಹನುಮಂತು ಗೌತಮಿಯವರ ಮುಂದೆ ಎರಡು ಹಾಡುಗಳನ್ನು ಹಾಡಿದ್ದಾರೆ.
ಬಿಗ್‌ಬಾಸ್ ಸೀಸನ್ 11ರಲ್ಲಿ ನೈಜ ಆಟವನ್ನಾಡುತ್ತಾ ಇರುವ ಹನುಮಂತ ಎರಡೆರಡು ಬಾರಿ ನಾಯಕನ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡು ಉಳಿದ ಸ್ಪರ್ಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.ಸದ್ಯ ದೊಡ್ಮನೆಯಲ್ಲಿ ಯಾರ ಸಹವಾಸಕ್ಕೋ ಹೋಗದೆ, ಯಾರ ಜೊತೆಯಲ್ಲಿಯೂ ಜಗಳ ಮಾಡಿಕೊಳ್ಳದೆ ಎಲ್ಲರ ಜೊತೆಯಲ್ಲಿಯೂ ಚೆನ್ನಾಗಿ ಇದ್ದಾರೆ ಎನ್ನಲಾಗಿದೆ.
ಮುಂದಿನ ದಿಗಳಲ್ಲಿ ಸಹಸ್ಪರ್ಧಿಗಳ ಜೊತೆ ಕಿರಿಕ್ ಮಾಡ್ಕೊಂಡು ನಾಮಿನೇಟ್ ಆಗ್ತಾರಾ ಇಲ್ಲಾ ಪೈನಲಿಸ್ಟ್ ಆಗ್ತಾರಾ? ಎಂಬುದನ್ನು ಕಾದು ನೋಡೊಣ.