ಬೆಂಗಳೂರು: ಇಂದು ಮಂಡನೆಯಾದ ಬಜೆಟ್ ʻ ಕನ್ನಡಿ ಒಳಗಿನ ಗಂಟುʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದು, ಇದು ಅತ್ಯಂತ ನಿರಾಶದಾಯಕ ಬಜೆಟ್ , ಈ ಬಜೆಟ್ಟಿನಿಂದ ಜನರಿಗೆ ಏನು ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಮಂಡನೆಯಾದ ಬಜೆಟ್ ಕುರಿತು ಈ ರೀತಿಯ ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಈ ಕೇಂದ್ರ ಬಜೆಟ್ ಕನ್ನಡಿ ಒಳಗಿನ ಗಂಟು, ಇದರಲ್ಲಿ ಕೃಷಿಗೆ, ನೀರಾವರಿಗೆ, ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಯಾವುದೇ ರೀತಿಯ ಒತ್ತನ್ನ ನೀಡಿಲ್ಲ ಆದರೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಣವನ್ನ ವಿನಿಯೋಗ ಮಾಡಿದ್ದಾರಂತೆ ಈ ಬಜೆಟ್ಟನ್ನು ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಅನ್ನು ರೂಪಿಸಲಾಗಿದೆ ಎಂದಿದ್ದಾರೆ.