ದಲಿತ – ಮುಸ್ಲಿಮರ ಮತ್ತು ಇತರೆ ಹಿಂದುಳಿದ ಜಾತಿಗಳ ರಾಜಕೀಯ ಒಗ್ಗಟ್ಟು ಮತ್ತು ಹೊಂದಾಣಿಕೆಯು ಅತ್ಯವಶ್ಯಕ, ಈ ಸಮುದಾಯಗಳ ವಿದ್ಯಾವಂತ ಮತ್ತು ಪ್ರಜ್ಞಾವಂತ ಯುವಕರು ಮತ್ತು ನಾಯಕರು ಯೋಚಿಸ ಬೇಕಿದೆ , ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಬಳಸಲು ವಿಫಲರಾಗಿದ್ದಾರೆ, ಇವರಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯಗಳು ಕೇವಲ ತಮ್ಮ ಬುದ್ದಿವಂತಿಕೆಯಿಂದ ಈ ರಾಜ್ಯದ ಅಧಿಕಾರದ ಗದ್ದುಗೆಯನ್ನು ಹಿಡಿದು ತಮ್ಮ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ,ಔದ್ಯೋಗಿಕ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಿಕೊಂಡು ಗೌರವಯುತ ಬದುಕನ್ನು ನಡೆಸುತಿದ್ದಾರೆ ಆದರೆ, ದಲಿತ-ಮುಸ್ಲೀಮರು ಮತ್ತು ಇತರೆ ಹಿಂದುಳಿದ ಜಾತಿಗಳು ಮಾತ್ರ ಇತರರ ಓಟು ಬ್ಯಾಂಕಾಗಿ ಉಳಿದುಕೊಂಡು ತಮ್ಮ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ,ಔದ್ಯೋಗಿಕ ಮತ್ತು ಉದ್ಯಮಶೀಲತೆಯಲ್ಲಿ ಹಿಂದುಳಿದಿದ್ದು ದೇಶ ಮತ್ತು ರಾಜ್ಯದಲ್ಲಿ ದ್ವಿತೀಯ ದರ್ಜೆಯ ನಾಗರಿಕರಾಗಿ ಬದುಕುತಿದ್ದಾರೆ.

ಶೇ 3% ಇರುವ ಬ್ರಾಹ್ಮಣರು  ಸ್ವಾತಂತ್ರ್ಯದ ನಂತರದಲ್ಲಿ 4 ಭಾರಿ ರಾಜ್ಯದ ಮುಖ್ಯಮಂತ್ರಿ ಆದರೆ,  ಶೇ 11% ಇರುವ ಒಕ್ಕಲಿಗರು 7 ಬಾರಿ ಹಾಗು 14% ಇರುವ ಲಿಂಗಾಯತರು 11 ಬಾರಿ ಮುಖ್ಯಮಂತ್ರಿ ಆಗಿದ್ದಾರೆ ,ಜೊತೆಗೆ ಶೇ 11 ಇರುವ ಒಕ್ಕಲಿಗರು ತಮ್ಮ ಸ್ವಂತ ರಾಜಕೀಯ ಪಕ್ಷದ ಮುಖಾಂತರ 3 ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಜೊತೆಗೆ ಪ್ರತಿ ಚುನಾವಣೆಯಲ್ಲಿಯೂ ಈ ಸಮುದಾಯದಿಂದ ಹೆಚ್ಚು ಶಾಸಕರು ಆಯ್ಕೆಯಾಗುತ್ತಾ ಬಂದಿದ್ದಾರೆ, ಹೀಗೆ ಅಧಿಕಾರದ ಗದ್ದುಗೆಯನ್ನು ಏರಿ ಸಮಾಜಿಕವಾಗಿ ಹೆಚ್ಚು ಬಲಗೊಂಡು ಆರ್ಥಿಕವಾಗಿ ಅತ್ಯಂತ ಶಕ್ತಿಶಾಲಿಗಳಾಗಿ ,ಶಿಕ್ಷಣ, ಉದ್ಯಮ, ಭೂಮಿ, ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ವಿಶೇಷವೆಂದರೆ ಒಕ್ಕಲಿಗರು ಮತ್ತು ಲಿಂಗಾಯತರು ಒಟ್ಟಿಗೆ ಸೇರಿದರೆ ಅವರು ಕೇವಲ  25% ಆಗುತ್ತಾರೆ, ಆದರೂ ಅವರೂ ಎಂದಿಗೂ ಒಟ್ಟಿಗೆ ಬರದೆ ಇದ್ದರು ಇಬ್ಬರೂ ಪ್ರತ್ಯೇಕವಾಗಿ ದಲಿತ, ಮುಸ್ಲಿಂ ಮತ್ತು ಇತರೆ ಹಿಂದಳಿದ ಜಾತಿಗಳನ್ನು ಬಳಸಿಕೊಂಡು ಖಾಯಂ ಆಗಿ ಅಧಿಕಾರ ಅನುಭವಿಸುತ್ತಾ ಬಂದಿರುವುದು ವಿಪರ್ಯಾಸವೆ ಸರಿ ! ಆದರೆ ದಲಿತ, ಮುಸ್ಲಿಂ ಮತ್ತು ಇತರೆ ಹಿಂದುಳಿದ ಸಮುದಾಯಗಳು ಎಂದಿಗೂ ತಮ್ಮ ಶಕ್ತಿಯ ಬಗ್ಗೆ ಯೋಚಿಸದ ಪರಿಣಾಮ ಇಂದಿಗೂ ಈ ಸಮುದಾಯಗಳು ಸಣ್ಣಪುಟ್ಟ ಅವಕಾಶಗಳನ್ನು ಅವರಿಂದ  ಕೇಳಿ ಪಡೆಯುವ ಸ್ಥಿತಿಯಲ್ಲಿವೆ.

ಇವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅತಿ ಹೆಚ್ಚು ಮಾತನಡುವ ಮತ್ತು ಗೌರವ ಹೊಂದಿರುವ ಸಮುದಾಯಗಳಾಗಿದ್ದರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು  ಅರ್ಥೈಸಿಕೊಳ್ಳುವಲ್ಲಿ ಮತ್ತು ಬಳಸುವಲ್ಲೂ ವಿಫಲರಾಗಿದ್ದಾರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಉದ್ದೇಶವನ್ನು ಈಡೇರಿಸಲು ಅಧಿಕಾರ ಬಹಳ ಮುಖ್ಯ, ಹಾಗೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಗಳಿಸಲು ಬೇಕಿರುವುದು ಜನಸಂಖ್ಯಾ ಬಲ, ಇಲ್ಲಿಯವರೆಗೆ ಅಧಿಕಾರ ಚುಕ್ಕಾಣಿ ಹಿಡಿದ ಯಾವುದೆ ರಾಜಕೀಯ ಪಕ್ಷವು ಗಳಿಸಿರುವ ಮತಗಳು ಶೇ 35% ರಿಂದ ಶೇ 42% ರಷ್ಟು ,  ಆದರೆ, ಶೇ 20% ರಷ್ಟಿರುವ ದಲಿತರು ಮತ್ತು ಶೇ 16% ರಷ್ಟಿರುವ  ಮುಸ್ಲಿಮರು ಅಂದರೆ ಒಟ್ಟಿಗೆ ಸೇರಿದರೆ ಇವರು ಶೇ 36%, ಆದರೆ ಇಲ್ಲಿಯ ವೆರಿಗೂ ಇವರಿಗೆ ಅಧಿಕಾರ ದೂರದ ಕನಸಾಗೆ ಉಳಿದಿದೆ , Is it not a mockery of Democracy ? ಈ ಬಾರಿ ನಡೆದ ವಿಧಾನ ಸಭೆ ಚುಣಾವಣೆಯಲ್ಲಿ ಕಾಂಗ್ರೆಸ್ಸಿಗೆ ಶೇ 63%  ದಲಿತರು ಮತ ಹಾಕಿದ್ದರೆ, ಶೇ 70% ರಷ್ಟು ಮುಸ್ಲಿಮರು, ಶೇ 49% ರಷ್ಟು ಒಕ್ಕಲಿಗರು ಹಾಗು ಶೇ  29%  ರಷ್ಟು ಲಿಂಗಾಯತರು ಮತ ಹಾಕಿದ್ದಾರೆ, ಆದರೂ ಮುಖ್ಯಮಂತ್ರಿಯ ಸ್ಥಾನದ ಪೈಪೋಟಿಯಲ್ಲಿ ದಲಿತ ಮತ್ತು ಮುಸ್ಲಿಂ ಇಲ್ಲದಿರುವುದು ಸತ್ಯ ಮತ್ತು ತಮಾಷೆ !

ದೇಶ ಮತ್ತು ಸಮುದಾಯಗಳ ಅಭಿವೃದ್ಧಿ ಮತ್ತು ಪರಿವರ್ತನೆಯಲ್ಲಿ ನಾಯಕರೆನಿಸಿಕೊಂಡವರ ಪಾತ್ರ ಬಹಳ ಮುಖ್ಯ, ನಾಯಕತ್ವ ಮತ್ತು ಆದರ್ಶಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ನಾವು ದಲಿತರ ಪರ ಮುಸ್ಲಿಮರ ಪರ ಹಿಂದುಳಿದವರ ಪರ ಎಂದೂ ಕೇವಲ ಮಾತುಗಳಲ್ಲಿ ಮತ್ತು ಚುನಾವಣಾ ಪ್ರಣಾಳಿಕೆಗಳಲ್ಲಿ ಹೇಳಿದರೆ ಸಾಲದು ಅವಕಾಶ ಸಿಕ್ಕಾಗ ಅದನ್ನು ಕಾರ್ಯಗತಗೊಳಿಸಲು ಸಿದ್ದರಿರಬೇಕು, ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಈ ಬಾರಿ ಆ ಅವಕಾಶ ಸಿಕ್ಕಿತ್ತು , comfortable majority ಇದ್ದರು ಕಾಂಗ್ರೆಸ್ ತಮ್ಮ ಬಾಯಿ ಮಾತಿನಲ್ಲಿ ಹೇಳುವಂತ ದಲಿತಪರ ಆದರ್ಶವನ್ನು ಕಾರ್ಯ ರೂಪದಲ್ಲಿ ತೋರಿಸಲು ವಿಫಲವಾಯಿತು, ಈ ಬಾರಿ ಬಹಳ ಮುಖ್ಯವಾಗಿ ದಲಿತರು ಮತ್ತು ಮುಸಲ್ಮಾನರು One-sided ಆಗಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸುವ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ತಂದು ಕೊಡುವ ಮುಖಾಂತರ ಅಧಿಕಾರ ಪಡೆದುಕೊಳ್ಳುವ ನೈತಿಕ ಹಕ್ಕನ್ನು ಸಾಧಿಸಿದ್ದಾರೆ, ದಲಿತ ಅಥವ ಮುಸ್ಲಿಮರಿಗೆ ಮುಖ್ಯಮಂತ್ರಿ ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷವು ತನ್ನ ಮೇಲಿರುವ ಋಣವನ್ನು ಕೂಡ ತೀರಿಸಿಕೊಳ್ಳ ಬಹುದಿತ್ತು ಆದರೆ ಆ ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ,

ದೊಡ್ಡವರು ಅಥವಾ ದೊಡ್ಡ ಜಾತಿಗಳು ಎನಿಸಿಕೊಂಡವರು ತಮ್ಮ ನೈತಿಕ ಜವಾಬ್ದಾರಿಯನ್ನು ನಿರ್ವಹಿಸದೆ ಎಲ್ಲಾ ಕಾಲಕ್ಕೂ ಎಲ್ಲವೂ ನಮಗೆ ಬೇಕು ಎನ್ನುವ ಮನಸ್ಥಿತಿಯನ್ನು ತೋರಿಸಿದ್ದು ಮಾತ್ರ ಅವರ ಸಣ್ಣ ತನವನ್ಮು ಎತ್ತಿ ತೋರಿಸುತ್ತಿದೆ, ಇತಿಹಾಸದುದ್ದಕ್ಕೂ ಇವರ ಸಣ್ಣತನಗಳು ಪದೆ ಪದೆ ಅನಾವರಣ ಗೊಳ್ಳುತ್ತಾ ಹೋಗುತಿದ್ದಾವೆ ಹೊರೆತು ಇವರು ಎಂದಿಗೂ ದೊಡ್ಡತನವನ್ನು ಪ್ರದರ್ಶನ ಮಾಡಲೆ ಇಲ್ಲ, ಈ ಬಾರಿಯಾದರೂ ಸಿದ್ದರಾಮಯ್ಯ ಮತ್ತು D K ಶಿವಕುಮಾರ್ ದಲಿತರನ್ನು ಮುಖ್ಯಮಂತ್ರಿ ಮಾಡುವ ಮುಖಾಂತರ ದೊಡ್ಡವರಾಗ ಬಹುದಿತ್ತು, ಆದರೆ ಅದ್ಯಾಕೋ ಅವರು ಎಂದೂ ದೊಡ್ಡವರಾಗಲು ಸಾದ್ಯವಿಲ್ಲ ಎಂಬದೆ ನಡೆದುಕೊಂಡಿದ್ದು ಮಾತ್ರ ದೊಡ್ಡ ದುರಂತ !

ಇನ್ನಾದರೂ ಈ ದಲಿತ-ಮುಸ್ಲಿಮರು ದೊಡ್ಡವರ‌ ಸಣ್ಣತನವನ್ನು ಅರಿತು ತಾವೂ ದೊಡ್ಡವರಲ್ಲದಿದ್ದರು ದಡ್ಡರು ಮಾತ್ರ ಅಲ್ಲಾ ಎಂದು ತೋರಿಸ ಬೇಕಿದೆ, ಹಾಗು ಯಾರ ನೆರವೂ ಇಲ್ಲದೆ ತವೇ ದೊಡ್ಡವರಾಗ ಬಹುದು ಎಂದು ಸಾಭೀತು ಪಡಿಸ ಬೇಕಿದೆ.  ಸಂಖ್ಯಾ ಬಲದ ಜೊತೆಗೆ ಸಂವಿಧಾನದ ಬಲ ನಿಮ್ಮ ಜೊತೆಗಿದೆ ಈಗ ಬೇಕಿರುವುದು ನಿಮ್ಮ ಒಗ್ಗಟ್ಟು ಮತ್ತು ಪರ್ಯಾಯದ ಆಲೋಚನೆ ಇವುಗಳು ಮಾತ್ರ ನಿಮ್ಮ ಗುಲಾಮಗಿರಿನ್ನು ಮುಕ್ತಿಗೊಳಿಸಲು ಸಾಧ್ಯ. ಇವರ ಶೈಕ್ಷಣಿಕ ಹಿಂದುಳಿಯುವಿಕೆ ಮತ್ತು ಅಪ್ರಜ್ಞೆಯು ಇವರ ಇಂದಿನ ಸ್ಥಿತಿಗೆ ಕಾರಣವಾಗಿದೆ ಆದರೆ ವಾಸ್ತವದಲ್ಲಿ ಇಂದು ಈ ಸಮುದಾಯಗಳಲ್ಲಿ ಶೈಕ್ಷಣಿಕ ಮಟ್ಟವು ಸುಧಾರಿಸಿದೆ ಹಾಗೆಯೇ ಒಂದಿಷ್ಟು ಪ್ರಜ್ಞೆಯು ಹೆಚ್ಚಿದೆ, ಹಾಗಾಗಿ ಇದರ ಜೊತೆಗೆ ಒಂದಿಷ್ಟು ಬದ್ದತೆ, ಪ್ರಾಮಾಣಿಕತೆ ಮತ್ತು ಶ್ರಮವನ್ನು ಸೇರಿಸಿ ಈ ಸಮುದಾಯಗಳುನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಕೋಮುವಾದ, ಜಾತಿವಾದ, ಅನಕ್ಷರತೆ, ನಿರುದ್ಯೋಗ , ಸಾಮಾಜಿಕ ಅಭದ್ರತೆ ದಿಡ್ಡವರ ಸಣ್ಣತನ ….ಇತ್ಯಾದಿಗಳು ತನ್ನಷ್ಟಕ್ಕೆ ತಾನೆ ಮಾಯವಾಗುತ್ತವೆ , ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕಾದರೆ ಇದು ಸರಿಯಾದ ಸಮಯ, ಇನ್ನೂ ಐದು ವರ್ಷಗಳು ಸಮಯವಿದೆ ! ಯೋಚಿಸಿ, ನಿಮ್ಮ ದಡ್ಡತನ ಮತ್ತು ಅವರ ಸಣ್ಣತನವನ್ನು ದೂರವಾಗಿಸಿ.

-ಹರಿರಾಮ್.ಎ-

Leave a Reply

Your email address will not be published. Required fields are marked *