ಭಾರತ ನ್ಯೂಜಿಲ್ಯಾಂಡ್‌ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಂತಹ ಪಂದ್ಯದಲ್ಲಿ ಭಾರತವೂ ಸೋತಿದೆ.ಆದ್ದರಿಂದ ಬಿಸಿಸಿಐ ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ಗಳಿಗೆ ಕರೆಯನ್ನು ನೀಡಿದೆ ಎಂದು ತಿಳಿದುಬಂದಿದೆ.

ಎರಡನೇ ಟೆಸ್ಟ್‌ ಮ್ಯಾಚ್‌ ಪುಣೆಯಲ್ಲಿ ನಡೆಯಲಿದೆ. ಆದ್ದರಿಂದ ಬಿಸಿಸಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಸ್ಟಾರ್‌ ಆಲ್‌ರೌಂಡರ್‌ಗಳಿಗೆ ಬುಲಾವ್‌ ನೀಡಲಾಗಿದೆ. ಆಲ್‌ರೌಂಡರ್‌ ಆಟಗಾರನಾದ ವಾಷಿಂಗ್ಟನ್‌ ಸುಂದರ್‌ 2 ಮತ್ತು 3ನೇ ಪಂದ್ಯದಲ್ಲಿ ಸ್ಥಾನವನ್ನು ಗಿಟಗಟಿಸಿಕೊಂಡಿದ್ದು, ಅವರ ಬದಲಾಗಿ ಯಾರ ಹೆಸರನ್ನು ಕೈಬಿಡಲಾಗುತ್ತದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಭಾರತ ತಂಡದ ಸೋಲಿನ ಬಳಿಕ ಬಿಸಿಸಿಐ ಮಹತ್ವದ ನಿರ್ಧಾನವನ್ನು ಕೈಗೊಂಡಿದೆ. ಮುಂದಿನ ಟೆಸ್ಟ್‌ ಮ್ಯಾಚಿನಲ್ಲಿ ಯಾವ ರೀತಿ ಪ್ರದರ್ಶನವನ್ನು ನೀಡಿ ಗೆಲುವನ್ನು ಸಾಧಿಸಲಿದೆ ಎಂದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *