ಹಾಸನ, ಫೆಬ್ರವರಿ 19: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಹಾಸನ ಜಿಲ್ಲಾ ಸಮಿತಿ ಸದಸ್ಯರ ನಿಯೋಗ ಹಾಸನದ ಆಜಾದ್ ರಸ್ತೆಯಲ್ಲಿರುವ ದರ್ಗಾ ದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಜರತ್ ಸೈಯದ್ ಅಹಮದ್ ಶಾ ಖಾದ್ರಿ ರವರ ಉರುಸ್ ಸಮಾರಂಭದಲ್ಲಿ ಭಾಗವಹಿಸಿ ಹೂವಿನ ಚಾದರ್ ಅರ್ಪಿಸಿ ಸೂಫಿ ಸಂತರ ಆಶೀರ್ವಾದ ಪಡೆದು ಮನುಕುಲದ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಸನ ಜಿಲ್ಲೆಯ ಐತಿಹಾಸಿಕ ಹಜರತ್ ಸೈಯದ್ ಅಹಮದ್ ಶಾ ಖಾದ್ರಿ (ರ.ಅ) (ಗುಜರಾತಿ ಬಾದಶಾ) ದರ್ಗಾ ಆಡಳಿತ ಮಂಡಳಿ ಸದಸ್ಯರ ಅವಿರತ ಪ್ರಯತ್ನದ ಫಲವಾಗಿ ವರ್ಷಂಪ್ರತಿ ಅದ್ದೂರಿಯಾಗಿ ಉರುಸ್ ಆಚರಣೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಐತಿಹಾಸಿಕ ದರ್ಗಾದ ಅಭಿವೃದ್ಧಿಗಾಗಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನಿಯೋಗ ದಲ್ಲಿ ಎಸ್ಡಿಪಿಐ ಹಾಸನ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಆನೆಮಹಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್, ಜಿಲ್ಲಾ ಸಮಿತಿ ಸದಸ್ಯರಾದ ಸೈಯ್ಯದ್ ಸಫೀರ್, ಫೈರೋಜ್ ಪಾಶ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸರ್ದಾರ್ ಪಾಷಾ, ಕಾರ್ಯದರ್ಶಿ ಸೈಯದ್ ನದೀಮ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.