ಹೊಸ ವರುಷ ಬಂತೆಂದರೆ ಡಿಸೆಂಬರ್ 31ರಂದೆ ಎಲ್ಲಾ ಕಡೆ ಜೋರು! ತಿನ್ನುವ ಕೇಕ್ ನಿಂದ ಹಿಡಿದು ಕುಡಿಯುವ ಡ್ರಿಂಕ್ಸ್ ವರೆಗೂ ಕುಡಿದು ತಿಂದು ಕಾರಿಕೊಂಡು wish you happy new year ಅಂತ ಹೇಳಿ ಅಪ್ಪಿಕೊಳ್ಳುವವರ ಸಂಖ್ಯೆ ಎಷ್ಟು! ಹೊಸ ವರ್ಷದ ಶುಭಾಶಯಗಳ ಜೊತೆಗೆ ಸಂಕ್ರಾಂತಿ ಶುಭಾಶಯಗಳನ್ನು ಕೋರುವ ಬ್ಯಾನರ್, ಪ್ಲೆಕ್ಸ್ ಗಳೆಷ್ಟು!. ಹಳ್ಳಿಯಿಂದ ನಗರದವರೆಗೂ ರಾರಾಜಿಸುವ ಇಂತಹ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳು ಹೊಸ ವರ್ಷವನ್ನು ಹಾಗೂ ಸಂಕ್ರಾಂತಿಯನ್ನು ಒಟ್ಟೊಟ್ಟಿಗೆ ವೆಲ್ ಕಮ್ ಮಾಡಿಕೊಂಡಿರುತ್ತವೆ. ವರ್ಷದಲ್ಲಿ ಬರುವ ಮೊದಲ ಆಚರಣೆಗಳು ಹಾಗೂ ಮೊದಲ ಹಬ್ಬಗಳಿವು.

Sun and Earth

ಸಂಕ್ರಾಂತಿ ಮಾಡುವ ಉದ್ದೇಶ SUN ಕ್ರಾಂತಿ ಆಗುತ್ತೆ ಅಂತಾ. ಅಂದರೇ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲು ಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ ಮತ್ತು ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಈ sun ನ ಕ್ರಾಂತಿ ಎಲ್ಲರ ಜೀವನದಲ್ಲಿ ಬದಲಾವಣೆ ತರಲೆಂದು ಎಲ್ಲರೂ ಬಯಸುತ್ತಾರೆ. ಅಲ್ಲದೇ ಅದೇ ದಿನ ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಆ ಒಂದೇ ದಿನವೆಂದು ಮತ್ತು ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆಂದು ಒಂದು ದೊಡ್ಡ ನಂಬಿಕೆಯೇ ಇದೆ. ಆ ದಿನ ಸತ್ತವರು ಡೈರೆಕ್ಟ್ ಸ್ವರ್ಗಕ್ಕೆ ಹೋಗುತ್ತಾರೆ ಅವರೇ ಪುಣ್ಯವಂತರು ಎಂದು ಲೆಕ್ಕಾಚಾರ ಕೂಡ ಹಾಕುತ್ತಾರೆ. ಮನುಷ್ಯನ ಬದುಕೇ ಪಾಪ ಪುಣ್ಯದ ಲೆಕ್ಕಾಚಾರದ ಮೇಲೆ ಸಾಗುತ್ತಿದೆ.

Cattles on Sankranthi Rituval

ಹಿಂದಿನ ಹಬ್ಬ ಆಚರಣೆಗಳಿಗೆಲ್ಲಾ ಒಂದೊಂದು ಹಿನ್ನೆಲೆ ವೈಜ್ಞಾನಿಕ ಸತ್ಯವಿದೆ. ಆದರೆ ಅವುಗಳನ್ನು ತಿಳಿದುಕೊಳ್ಳುವ ಗೋಜಿಗೆ ಬಹುತೇಕರು ಹೋಗುವುದಿಲ್ಲ. ಅವರು ಕೇವಲ ಆಚರಣೆಗಳನ್ನಷ್ಟೇ ಮಾಡುತ್ತ ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಒಂದು ಸಂಪ್ರದಾಯದಂತೆ ಆಚರಿಸುತ್ತಾರೆ. ಈ ಸಂಪ್ರದಾಯಗಳ ಮೂಲವನ್ನು ಅರಿಯದೆ ಅವುಗಳನ್ನು ಯಥಾವತ್ತಾಗಿ ಆಚರಿಸಿದಾಗ, ಕಾರಣ ಗೊತ್ತಿಲ್ಲದಾಗ, ಅವುಗಳನ್ನು ಮೂಢನಂಬಿಕೆಗಳೆಂದು ಕರೆಯಬಹುದು. ಇಂತಹ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದಲೂ ಸಾಗಿ ಬಂದಿವೆ. ಆದರೆ ಸಂಕ್ರಾಂತಿ ಹಬ್ಬಕ್ಕೆ ಒಂದು ವೈಜ್ಞಾನಿಕ ಹಾಗೂ ಧಾರ್ಮಿಕ ನಂಬಿಕೆ ಇದೆ. ಸೂರ್ಯನು ತನ್ನ ದಕ್ಷಿಣ ಪಥವನ್ನು ಬದಲಿಸಿ ಉತ್ತರಕ್ಕೆ ಚಲಿಸಿ ಹಗಲಿನ ಸಮಯವನ್ನು ಹೆಚ್ಚು ಮಾಡುವುದು ಹಾಗೂ ವರ್ಷದ ಮೊದಲೇ ಬೇಸಿಗೆಯ ಸಂಭ್ರಮಕ್ಕೆ ಸ್ವಾಗತ ಕೋರುವುದಕ್ಕೆ ಅಣಿಯಾಗುವುದು ಒಂದು ಕಡೆಯಾದರೆ ಜಾನುವಾರುಗಳಿಗೆ ಕಿಚ್ಚು ಹಾಯಿಸಿ ಅವುಗಳ ಮೈಮೇಲಿನ ಕ್ರಿಮಿ ಕೀಟಗಳನ್ನು ನಾಶಪಡಿಸಿ ಅವುಗಳಿಗೊಂದು ನೆಮ್ಮದಿಯ ಜೀವನವನ್ನು ಕಲ್ಪಿಸಿ ಕೃತಜ್ಞತಾ ಭಾವವನ್ನು ತೋರಿಸುವುದು ಇನ್ನೊಂದು ಕಾರಣವಾಗಿದೆ. ಆದ್ದರಿಂದಲೇ ಸಂಕ್ರಾಂತಿಯನ್ನು ದನಗಳ ಹಬ್ಬ ಎಂದು ಕರೆಯುವರು. ಇವೆಲ್ಲಾ ಧಾರ್ಮಿಕ, ಆದರೆ ವೈಜ್ಞಾನಿಕ ಕಾರಣವೇನೆಂದರೆ ಸಂಕ್ರಾಂತಿ ಹಬ್ಬ ಬರುವುದೇ ಕೊರೆಯುವ ಚಳಿಯಲ್ಲಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕೈಕಾಲು ಬಿರಿಯುವುದು, ತುಟಿ ಹೊಡಿಯುದು ಹಾಗೂ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗಿ ಸ್ವಲ್ಪ ತೆಳ್ಳಗಾಗಿರುತ್ತಾರೆ. ಅದನ್ನು ತುಂಬಿಕೊಂಡು ಮತ್ತೇ ಹೊಸ ರಕ್ತ ಸೇರಿ, ಕಾಂತಿ ಹೊರ ಹೊಮ್ಮಲೆಂದೆ ಎಳ್ಳು, ಬೆಲ್ಲ, ಶೇಂಗಾ, ಕೊಬ್ಬರಿ, ಕಬ್ಬು ಮುಂತಾದ ಪದಾರ್ಥಗಳನ್ನು ತಿನ್ನಲು ಕೊಡುವುದು. ಅಂದರೇ ಇವನ್ನೆಲ್ಲ ತಿನ್ನುವುದು ಈ ಕಾಲದಲ್ಲಿ ಬಹಳ ಯೋಗ್ಯವೆಂದು ನಮ್ಮ ಪೂರ್ವಿಕರು ಮೊದಲೇ ಕಂಡುಕೊಂಡಿದ್ದಾರೆ. ಇದು ನಮ್ಮ ಅರೋಗ್ಯದ ದೃಷ್ಟಿಯಿಂದ ಬಹು ಯೋಗ್ಯವಾದ ವೈಜ್ಞಾನಿಕ ಕಾರಣ.

ಎಳ್ಳು ಬೆಲ್ಲ

ಸಂಕ್ರಾಂತಿ ಬಂತೆಂದರೆ “ಎಳ್ಳು ಬೆಲ್ಲ ತಿಂದು, ಒಳ್ಳೇದು ಮಾತಾಡಿ” ಎಂಬ ನಾಣ್ಣುಡಿ ಸಾಮಾನ್ಯವಾಗಿರುತ್ತದೆ. ಕಾರಣ ಸಂಕ್ರಾಂತಿ ಮೂಲತಃ ಹಳ್ಳಿಗರ ಹಬ್ಬ. ಹಳ್ಳಿಗಳಲ್ಲಿ ಗಲಾಟೆ, ಗದ್ದಲ, ಇತರರ ಜೊತೆ ಜಗಳ, ಬೈಗುಳ,ಸಾಮಾನ್ಯ. ಇಂತಹ ದ್ವೇಷ, ಅಸೂಯೆ, ಮನೋಭಾವಗಳು ಕಡಿಮೆಯಾಗಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕೆಂದೆ ಊರಿನ ಗೌಡ ಹಿಂದಿನ ಕಾಲದಲ್ಲಿ ಜಗಳ ಮಾಡಿಕೊಂಡು ಮುನಿಸಿಕೊಂಡವರನ್ನು ಕರೆಸಿ ಎಳ್ಳು ಬೆಲ್ಲ ನೀಡಿ ಒಳ್ಳೇದು ಮಾತಾಡಿ ಅಂತ ರಾಜಿ ಮಾಡಿಸುತ್ತಿದ್ದ. ಆಗೆಲ್ಲ ಮುನಿಸಿಕೊಂಡವರು ಹಾಗೂ ಜಗಳ ಮಾಡಿಕೊಂಡವರು ರಾಜಿಯಾಗಿ ಮತ್ತೇ ಖುಷಿಯಾಗಿ ಬಾಳುತ್ತಿದ್ದರು. ಅಷ್ಟೇ ಅಲ್ಲ ದನಕರುಗಳಿಗೆ ಸಿಂಗರಿಸಿ ಊರಿನ ತುಂಬೆಲ್ಲಾ ಸುತ್ತರಿಸಿ ಕಿಚ್ಚು ಹಾಯಿಸಿ ಸಂತಸಪಡುತ್ತಿದ್ದರು. ಮನೆ ಮನೆಗೂ ಎಳ್ಳು ಬೆಲ್ಲ ಹಂಚಿ ತಾವೆಲ್ಲರೂ ಒಂದೇ ಎಂದು ಜಗಕ್ಕೆ ತೋರಿಸುತ್ತಿದ್ದರು. ಆಗಿನ ಸಂಕ್ರಾಂತಿಯೇ ಬೇರೆ.!

ಈಗಿನ ಸಂಕ್ರಾಂತಿಯೇ ಬೇರೆ! ಇದು ಮೊಬೈಲ್ ಯುಗ. ಬಹಳ ವೇಗವಾಗಿ ಓಡುತ್ತಿದೆ. ಹಸಿ ಸಗಣಿ ಇದ್ದ ಜಾಗ ಈಗ ಟೈಲ್ಸ್ ಆಗಿ ಬದಲಾಗಿದೆ. ದನಕರುಗಳ ಜಾಗಕ್ಕೆ ಟ್ರ್ಯಾಕ್ಟರ್, ಕಾರ್ ಬಂದಿವೆ. ಎಳ್ಳು ಬೆಲ್ಲದ ಬದಲಿಗೆ ಪಿಜ್ಜಾ ಬರ್ಗರ್ ಬಂದಿವೆ. ಎಲ್ಲರೂ ಕೂಡಿ ಹಬ್ಬ ಮಾಡುತ್ತಿದ್ದ ಹಳ್ಳಿಗಳು ಬಿಕೋ ಎನ್ನುತ್ತಾ ಬರೀ ಕೈಲಾಗದ ಮುದುಕರು ಮಕ್ಕಳು ಇದ್ದಾರೆ. ಯುವಕರು ವಿದ್ಯಾವಂತರು ಪಟ್ಟಣ ಸೇರಿದ್ದಾರೆ. ಮನೆಗಳಲ್ಲಿ ಎಳ್ಳು ಇಲ್ಲ, ಬೆಲ್ಲವೂ ಇಲ್ಲಾ. ಇದ್ದರೂ ಕೊಡುವವರು ಇಲ್ಲಾ. ಹಾಗೊಮ್ಮೆ ಹೀಗೋಮ್ಮೆ ಬರುವ ಮನೆ ಮಕ್ಕಳು ಅಪರಿಚಿತರಾಗಿದ್ದಾರೆ. ಊರಿನ ಉಸಾಬರಿ ಕಟ್ಕೊಂಡು ನಮಗೇನಾಗಬೇಕು ಎಂಬುದೇ ಪ್ರತಿಯೊಬ್ಬರ ದ್ಯೇಯ ವಾಕ್ಯವಾಗಿದೆ. ಉದ್ಯೋಗ ಮಾಡುವವರಿಗೆ ರಜೆ ಇಲ್ಲಾ. ರಜೆ ಇದ್ದವರಿಗೆ ದುಡ್ಡಿಲ್ಲ. ಎಲ್ಲಾ ಇದ್ದರೂ ಹೋಗುವ ಮನಸಿಲ್ಲ. ಎಲ್ಲರು ಯಾಂತ್ರಿಕ ಜೀವನವನ್ನು ಅಪ್ಪಿಕೊಂಡು ಸಾಗುತ್ತಿದ್ದೇವೆ. Sun ಕ್ರಾಂತಿ ಹೋಗಿ ಈಗ some ಕ್ರಾಂತಿಯಾಗಿದೆ. ಮೊಬೈಲ್ ಗೀಳು, ಮುಂಗೋಪ, ಮನಸ್ತಾಪ, ಅಶಾಂತಿ, ಆಸಹಿಷ್ಣುತೆ ಮನದಲ್ಲಿ ನೆಲೆಸಿವೆ. ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ದಿನಗಳು ಉರುಳುತ್ತಿವೆ. ಸಣ್ಣತನಗಳು ಆವರಿಸುತ್ತಿವೆ. ದುಡಿಮೆ, ದುಡ್ಡು, ಯಶಸ್ಸು, ಕೀರ್ತಿ ಮುಂತಾದವುಗಳ ಹಿಂದೆ ಓದುತ್ತಿದ್ದೇವೆ. ಸಣ್ಣ ಪುಟ್ಟ ವಿಷಯಗಳಲ್ಲಿರುವ ಖುಷಿಯನ್ನು ಮರೆಯುತ್ತಿದ್ದೇವೆ. ಸದಾ ಬೇರೆಯವರಿಗೆ ಒಪ್ಪಿಗೆಯಂತೆ ಮುಖವಾಡ ಧರಿಸಿ ಅದರಂತೆ ಬದುಕುತ್ತಿದ್ದೇವೆ. ಯಾರನ್ನೂ ಯಾರು ನಂಬುವುದಿಲ್ಲ ಅದಕ್ಕಾಗಿ ಸಿಸಿ ಕ್ಯಾಮರಾಗಳ ಮೊರೆ ಹೋಗಿದ್ದೇವೆ. ಆಧುನಿಕತೆಯ ಭರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. “ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ” ಎಂಬ ಮಹಾತ್ಮಾ ಗಾಂಧೀಯ ಮಾತು ಕನಸಾಗಿಯೇ ಉಳಿಯುತ್ತದೆ. ಹಳ್ಳಿಗಳಲ್ಲಿ ಜೀವಿಸಲು ಇಷ್ಟ ಪಡದ ಜನ ಅವುಗಳನ್ನು ಹೇಗೆ ಉದ್ದಾರ ಮಾಡಿಯರು? ಎಲ್ಲವೂ ಕಮರ್ಷಿಯಲ್, ಎಲ್ಲವೂ ಅನುಮಾನ. ಹೀಗೆ ಆದರೆ ಭಾರತೀಯರ ಅಸ್ಮಿತೆಯೇ ಕಳೆದು ಹೋಗಿ ಮುಂದೊಂದು ದಿನ ಇದರ ಭವ್ಯ ಪರಂಪರೆ ಮಣ್ಣು ಪಾಲಗದೇ ಉಳಿದಿತೇ?ಎಲ್ಲವೂ ಕಾಲಾಯ ತಸ್ಮಾಯ ನಮಃ
Any way ಸಂಕ್ರಾಂತಿ ಹಬ್ಬದ ಶುಭಾಶಯಗಳು.

“ಎಳ್ಳು ಬೆಲ್ಲ ತಿಂದು ಒಳ್ಳೇದು ಮಾತಾಡಿ”

-ರಂಗಸ್ವಾಮಿ ದೇವರಬೆಟ್ಟ

Leave a Reply

Your email address will not be published. Required fields are marked *