ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ನನ್ನ ಹಾಗೂ ನನ್ನ ಮಗನನ್ನು ಕೊಲ್ಲಲು ಸುಪಾರಿಯನ್ನ ನೀಡಿದ್ದಾರೆಂದು ಗಂಭೀರ ಶಿವಸೇನೆ ನಾಯಕ ರಾವುತ್ ಆರೋಪವನ್ನು ಮಾಡಿರುವುದು ತಿಳಿದುಬಂದಿದೆ.
ಈ ಕುರಿತು ಉಪಮುಖ್ಯಮಂತ್ರಿಗೆ ಪತ್ರವನ್ನ ಬರೆದಿದ್ದು ನನ್ನನ್ನು ಹತ್ಯೆ ಮಾಡಲು ಥಾಣೆಯಲ್ಲಿ ರೌಡಿಗಳನ್ನು ಗೊತ್ತುಮಾಡಿದ್ದಾರೆ.ಈ ವಿಷಯದ ಕುರಿತು ಗಂಭೀರವಾಗಿ ಪರಿಗಣಿಸಬೇಕಾಗಿ ರಾವುತ್ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆಯ ಪ್ರಚಾರಗಳು ನಡೆಯುತ್ತಿದ್ದು ಪ್ರತಿನಿಧಿಗಳ ಮೇಲೆ ಹಲ್ಲೆಗಳಾಗುತ್ತಿರುವುದನ್ನ ನಾವು ಗಮನಿಸಿರಬಹುದು, ಆದರೆ ರಾವುತ್ ಪತ್ರವನ್ನೇಕೆ ಬರೆದಿದ್ದಾರೆಂಬುದನ್ನು ಯೋಚಿಸುತ್ತಾ ಪತ್ರಕ್ಕೆ ಉತ್ತರ ನೀಡಿದ ಅವರು ಸುಳ್ಳು ಹೇಳುವ ಮೂಲಕ ಬೇರೆಯವರ ಸಹಾನುಭೂತಿ ಪಡೆಯಲು ಸಾದ್ಯವಿಲ್ಲ, ಯಾವುದೇ ಸಾಕ್ಷಿ ಪುರಾವೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲವೆಂದು ಫಡ್ನವೀಸ್ ಅವರು ರಾವುತ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆಂದು ಮಹಾರಾಷ್ಟ್ರದ ಮೂಲಗಳು ವರದಿಯನ್ನ ಮಾಡಿವೆ.