ಲಂಡನ್: ಕೆನಡಾದಲ್ಲಿ ಆರ್‌ಎಸ್‌ಎಸ್ ಸಂಘವನ್ನು ಉಗ್ರ ಸಂಘಟನೆ ಎಂದು ಪರಿಗಣಿಸಿ ಭಾರತಕ್ಕೆ ದಿಗ್ಬಂಧನ ಹಾಕಬೇಕು ಎಂದು ಕೆನಡಾದ ಎನ್‌ಡಿಪಿ ಸಂಸದರು ಆಗ್ರಹ ಮಾಡಿದ್ದಾರೆ.
ಕೆನಡಾ ಸಂಸತ್ತಿನಲ್ಲಿ ಮಾತನಾಡಿದ ಸಂಸದರು, ಬಿಜೆಪಿ ಪಕ್ಷವನ್ನು ಜನಾಂಗೀಯವಾದಿಗಳು ಎಂದು ಕರೆದಿರುವ ಅವರು, ಹಿಂಸೆಯನ್ನು ಸಂಭ್ರಮಿಸುವ, ಹಿಂಸೆಗೆ ಪ್ರಚೋದನೆ ನೀಡುವ ಪಕ್ಷವೆಂದು ವರ್ಣನೆ ಮಾಡಿದ್ದಾರೆ. ಭಾರತದ ದೇಶದ ಜೊತೆ ಯಾವುದೇ ಮಾಹಿತಿನ್ನಾಗಲೀ, ಕೆನಡಾದಿಂದ ಶಸ್ತ್ರಾಸ್ತ್ರಗಳ ಪೂರೈಕೆಗಳನ್ನು ನಿಷೇಧಿಸಬೇಕು ಮತ್ತು ಅದರೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದೆಂದು ಹೇಳಿದ್ದಾರೆ.
ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಚರ್ಚೆಯ ವೇಳೆಯಲ್ಲಿ ಎನ್‌ಡಿಪಿ ಮುಖಂಡರು, ಆರ್‌ಎಸ್‌ಎಸ್ನವರನ್ನು ಕಂಡರೆ ಸಿಖ್ಖರು ಎಷ್ಟು ಭಯಪಟ್ಟುಕೊಳ್ತಾರೆ ಮತ್ತು ಗಡಿಪಾರಿನಂತಹ ಭೀತಿಯನ್ನು ಎದುರಿಸುತ್ತಿರುವುದನ್ನು ಬಣ್ಣಿಸಿದ್ದಾರೆ. ಕ್ರಿಮಿನಲ್‌ಗ್ಯಾಂಗುಗಳಿಂದ ಮನೆಗಳಲ್ಲೇ ಹತ್ಯೆಗೊಳಗಾದವರ ಭದ್ರತೆಗಾಗಿ ಸಾವಿರಾರು ಡಾಲರ್‌ಗಳನ್ನು ವ್ಯಯಿಸಬೇಕಾಗಿದ್ದು, ಯಾವಾಗ ಏನು ಆಗುತ್ತದೆ ಎನ್ನುವ ಭಯದಲ್ಲಿ ಹೋಟೆಲ್ಲುಗಳಲ್ಲಿ ತಂಗುವ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕವನ್ನು ಹೊರಹಾಕಿದ್ದಾರೆ.