ಬೆಂಗಳೂರು: 2025ನೇ ವರ್ಷದ ಐಪಿಎಲ್ ಮತ್ತು ಟಿ-20 ಪಂದ್ಯಗಳ ಹರಾಜು ಕುತೂಹಲವನ್ನು ಮೂಡಿಸಿದ್ದು, ಹರಾಜಿನ ನಿಯಮಗಳನ್ನು ಬಿಸಿಸಿಐ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ.
ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾರನ್ನು ಉಳಿಸಿಕೊಳ್ಳುತ್ತದಾ? ಕೈಬಿಡುತ್ತಾ? ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಎಂಐ ತಂಡ ರೋಹಿತ್ ಶರ್ಮಾರನ್ನು ಬಿಟ್ಟುಕೊಟ್ಟರೆ ಆರ್‌ಸಿಬಿ ತಂಡ ಖರೀದಿಸಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಗರಾದ ಮೊಹಮದ್ ಕೈಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಸಿಬಿಯ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ ಆರ್‌ಸಿಬಿಗೆ ಬರುವ ಸಾದ್ಯತೆಗಳೂ ತುಂಬಾ ವಿರಳ ಹೀಗೆ ಆಗಲು ಸಾದ್ಯವಿಲ್ಲವೆಂದಿದ್ದಾರೆ.
ಮುಂಬೈ ತಂಡದಿಂದ ರೋಹಿತ್ ಶರ್ಮಾ ಆರ್‌ಸಿಬಿಗೆ ಬಂದರೆ ತುಂಬಾ ದೊಡ್ಡ ಸುದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಗುಜರಾತ್ ಟೈಟನ್ಸ್ ಬಿಟ್ಟು ಬಂದ ಹಾರ್ದಿಕ್ ಪಾಂಡ್ಯರವರ ವಿಚಾರ ಹೆಚ್ಚು ಸದ್ದು ಮಾಡಲಿಲ್ಲ ಆದರೆ ರೋಹಿತ್ ವಿಷಯದಲ್ಲಿ ಹಾಗಲ್ಲ. ಅವರೇನಾದರೂ ಆರ್‌ಸಿಬಿಗೆ ಬಂದರೆ ಹೇಗಿರುತ್ತದೆ ಕಲ್ಪನೆ ಮಾಡಿಕೊಳ್ಳಿ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವೂ ರೋಹಿತ್ ಶರ್ಮಾರವರನ್ನು ಬಿಟ್ಟುಕೊಡುವ ಮಾತೇ ಇಲ್ಲವೆಂದು ಹೇಳಿದ್ದು, ಅದೇ ವೇಳೆಯಲ್ಲಿ ಫಫ್ ಡೂಪ್ಲೆಸಿ ಆರ್‌ಸಿಬಿ ತಂಡದ ನಾಯಕರಾಗಿ ಮುಂದುವರೆದರೆ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.