ನವದೆಹಲಿ: ಕಾಂಗ್ರೆಸ್ ಪಕ್ಷವೂ SCST ಮತ್ತು OBC ಮೀಸಲಾತಿಯನ್ನುಅಂತ್ಯ ಮಾಡಲು ಸಂಚು ಮಾಡುತ್ತಿದೆ . ರಾಹುಲ್ ಗಾಂಧಿ ಬಗ್ಗೆ ಎಚ್ಚರಿಕೆಯಿರಲಿ, ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪ ಮಾಡಿದ್ದಾರೆ.
ಅಮೇರಿಕದ ಜಾರ್ಜ್ ಟೌನ್ ಯುನಿವರ್ಸಿಟಿಯ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಸಮಯ ಬಂದಾಗ ಮೀಸಲಾತಿಯನ್ನು ರದ್ದುಗೊಳಿಸುವ ಕುರಿತು ಕಾಂಗ್ರೆಸ್ ಚಿಂತನೆ ಮಾಡುತ್ತಿದೆ, ಪ್ರಸ್ತುತ ಈ ಸಮಯ ಮೀಸಲಾತಿಯನ್ನು ಕೊನೆಗೊಳಿಸುವ ಸಮಯವಲ್ಲವೆಂದಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ OBCಯವರಿಗೆ ಮೀಸಲಾತಿಯನ್ನುಜಾರಿ ಮಾಡಲಿಲ್ಲ. ಜಾತಿಗಣತಿ ನಡೆಯದಂತೆ ಇವರು ಮಾಡಿದ ಡ್ರಾಮದ ಬಗ್ಗೆ ಎಚ್ಚರವಿರಲಿ, ಭಾರತ ದೇಶ ಉತ್ತಮ ಸ್ಥಿತಿಯಲ್ಲಿದ್ದಾಗ SCST ಮತ್ತು OBC ಮೀಸಲಾತಿಯನ್ನು ಅಂತ್ಯ ಮಾಡುತ್ತೇವೆ ಎಂದು ಹೇಳಿರುವ ರಾಹುಲ್ ಗಾಂಧಿಯವರ ನಾಟಕದ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಮಾಯಾವತಿ ಹೇಳಿದ್ದಾರೆ.