ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ, ‘ಕಾಂಗ್ರೆಸ್ ಮಾಡುತ್ತಿರುವ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ’ ಬಲಿಪಶು ಆಗಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆ ನಗರದಲ್ಲಿ ಮಾತನಾಡಿದ ಅವರು, ʼಮಾಜಿ ಸಚಿವ ಈಶ್ವರಪ್ಪನ ವಿರುದ್ಧ ಷಡ್ಯಂತ್ರ ಮಾಡಿದ್ರು ಕೈ ನಾಯಕರು, ಆದರೆ ಸದೃಢರಾಗಿದ್ದರು. ಆದ್ದರಿಂದ ಅವರ ಬೇಳೆ ಬೇಯಲಿಲ್ಲ, ಈಗ ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ವಿಚಾರದ ಕುರಿತು ಮಾತನಾಡಿ, ಡಿಕೆಶಿನ ನಾವು ಮುಗಿಸೋದಲ್ಲ ಬದಲಾಗಿ ಕಾಂಗ್ರೆಸ್ ಮುಖಂಡರೇ ರಾಜಕೀಯವಾಗಿ ಮುಗಿಸಿಬಿಡುತ್ತಾರೆ. ಕನಕಪುರ, ಸಾತನೂರು ಕ್ಷೇತ್ರದ ಜನರು ಸೋಲಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲೇ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದು ಬಣಗಳಾಗಿವೆ. ಸಿಎಂ ಪಟ್ಟಕ್ಕೆ ಏರಲು ಅಭ್ಯರ್ಥಿಗಳು ಸಾಲಾಗಿ ನಿಂತಿದ್ದಾರೆ ಆದ್ದರಿಂದ ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ ಸಿಎಂ ಅಭ್ಯರ್ಥಿಯನ್ನು ಮೊದಲೇ ಹೇಳಿ ಚುನಾವಣೆಗೆ ನಡೆಸಲಿʼ ಎಂದು ಸವಾಲು ಹಾಕಿದರು.