ನಮ್ಮ ಜನರು ಈ ಆಧುನಿಕ ಜೀವನ ಶೈಲಿಯಿಂದ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದು,ಚಿಕ್ಕ ಸಮಸ್ಯೆಗಳಿಂದ ದೊಡ್ಡ ಸಮಸ್ಯೆಗೂ ಸಿಲುಕಿಕೊಂಡಿರುತ್ತಾರೆ.ಎಲ್ಲರೂ ಅನುಭವಿಸುತ್ತಿರುವ ಸಾಮಾನ್ಯವಾದ ಸಮಸ್ಯೆಯೆಂದರೆ ವಯಸ್ಸಿಗೆ ಮೀರಿದ ಆಕಾರ, ಮತ್ತು ಡೊಳ್ಳು ಹೊಟ್ಟೆ ಬರುವುದು.
ಕೆಲವರು ನೋಡಿದೊಡನೆ ಇವನು ಇನ್ನು ಚಿಕ್ಕ ಹುಡುಗ ಆದ್ರೆ ದೊಡ್ಡ ಗಂಡಸಿನ ಹಾಗೆ ಹೊಟ್ಟೆ ಬಂದಿದೆ ಎಂದು ಮಾತನಾಡಿಕೊಳ್ಳುತ್ತಾರೆ.ಈ ರೀತಿಯ ಮಾತುಗಳನ್ನು ಕೇಳಿಸಿಕೊಂಡವರ ಪಾಡು ಹೆಳತೀರದಾಗಿರುತ್ತದೆ.ಆ ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಜಿಮ್‌ಗೆ ಹೋಗುವುದು, ವಾಕಿಂಗ್ ಮಾಡುವುದು, ಜಾಗಿಂಗ್ ಮಾಡುವುದು, ಯೋಗಮಾಡುವುದು, ಜಾಸ್ತಿ ಊಟ ಮಾಡಿದರೆ ದಪ್ಪ ಆಗುತ್ತೇವೆಂದು ಊಟ ಬಿಡುವುದು, ಡಯಟ್ ಮಾಡುವುದ, ಹೀಗೆ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿರುತ್ತಾರೆ.
ಅಷ್ಟೋ ವರ್ಷದಿಂದ ತಿಂದು ಕೊಬ್ಬಿರುವ ಹೊಟ್ಟೆ ದಿಡೀರನೆ ಕರಗುವುದುಂಟೆ? ಹೊಟ್ಟೆಯ ಬೊಜ್ಜನ್ನು ಕರಗಿಸಲು ಕಷ್ಟಕರವಾದ ವಿಷಯವಾಗಿದೆ. ಹೇಗೋ ಕಡಿಮೆಯಾಗಲೀ ಎಂದು ಮೇಲೆ ಹೇಳಿರುವ ಯಾವುದಾದರೂ ಒಂದನ್ನು ತಮ್ಮ ಜೀವನಶೈಲಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಸ್ವಲ್ಪವೂ ಫಲಿತಾಂಶ ಸಿಗದೇ ಏನು ಮಾಡಿದ್ರೂ ವೆಸ್ಟ್ ಎಂದು ಆ ಆಲೋಚನೆಯನ್ನು ಕೈಬಿಟ್ಟವರು ಕೂಡಾ ನಮ್ಮಲ್ಲಿ ಇದ್ದಾರೆ.
ಮತ್ತೆ ಕೆಲವರು ಹೊಟ್ಟೆಯ ಬೊಜ್ಜು ಹೆಚ್ಚಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.ನಮ್ಮ ಆಹಾರ ಪದ್ದತಿಯಿಂದ ಬೊಜ್ಜು ಹೆಚ್ಚಾಗುತ್ತದೆ. ನಾವು ಸೇವಿಸುವ ಅನ್‌ಹೆಲ್ದಿ ಪುಡ್‌ನಿಂದ ಬರುತ್ತದೆ. ಬೇಕರಿ ತಿನಿಸುಗಳಿಂದ ಬೊಜ್ಜು ಬರುತ್ತದೆ. ಇವುಗಳನ್ನೆಲ್ಲಾ ಬಿಟ್ಟರೆ ಕಡಿಮೆಯಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತವೆ.
ನಾವು ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಕ್ರಮೇಣ ಕಡಿಮೆಯಾಗುತ್ತದೆ ಎನ್ನಬಹುದಾಗಿದೆ.
ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ನಾರಿನಂಶವಿರುವಮತೆ ನೋಡಿಕೊಳ್ಳಬೇಕು.
ಎಲ್ಲರೂ ಹೇಳುವ ಪ್ರಕಾರ 4ಲೀಟರ್‌ಗಿಂತ ಹೆಚ್ಚು ನೀರನ್ನು ಕುಡಿಯಬೇಕು ಎನ್ನುವ ಹಾಗೆ ಹೆಚ್ಚು ನೀರನ್ನು ಕುಡಿಯಬೇಕು.
ತೂಕ ಹೆಚ್ಚಾಗುವ ಭಯದಿಂದ ಕೆಲವರು ಊಟ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಇದು ತಪ್ಪು ತಿಳಿವಳಿಕೆ. ಊಟವನ್ನು ಬಿಟ್ಟರೆ ಪ್ರೋಟಿನ್ ,ವಿಟಮಿನ್, ಕೊರತೆಯುಂಟಾಗಿ ಮತ್ತೊಂದು ಸಮಸ್ಯೆಯನ್ನು ಆಹ್ವಾನ ಮಾಡಿದಂತಾಗುತ್ತದೆ. ಅದ್ದರಿಂದ ಹೊಟ್ಟೆ ತುಂಬಾ ಆರೋಗ್ಯಕರವಾದ ಊಟ ಮಾಡಬೇಕು.
ನಾರಿನಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನ ಸೇವಿಸುವುದರ ಮೂಲಕ ಬೊಜ್ಜಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಕಾಫಿ-ಟೀ ಸೇವನೆಯನ್ನು ಕಡಿಮೆ ಮಾಡಿಕೊಂಡು ಸಕ್ಕರೆ ಹಾಕದ ಟೀ, ಗ್ರೀನ್ ಟೀ, ಲೆಮನ್ ಟೀ, ನಿಂಬೆ ಹಣ್ಣಿನ ಜ್ಯೂಸ್, ಕುಡಿಯುವುದರಿಂದ ಅನಗತ್ಯ ಬೊಜ್ಜು ಕ್ರಮೇಣ ಕರಗುತ್ತದೆ.
ನಾವು ಸೇವಿಸುವ ಆಹಾರದಲ್ಲಿ ಬೂದುಗುಂಬಳ ಕಾಯಿ, ಬೆಟ್ಟದ ನೆಲ್ಲಿಕಾಯಿ, ಹೂಕೋಸು, ಬ್ರೋಕಲಿ, ಸೇರಿಸಿಕೊಂಡರೆ ಒಳ್ಳೆಯದಾಗುತ್ತದೆ.