ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರವಧಿಯಲ್ಲಿ ಎಷ್ಟು ಭಯೋತ್ಪಾದನೆಗಳು ನಡೆದಿವೆ.ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದು ನೆಲೆಸಿದ್ದಾರೆ. ಎಷ್ಟು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಎಷ್ಟು ಭ್ರಷ್ಟಚಾರ ನಡೆದಿದೆ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಗೃಹಮಂತ್ರಿಗಳು ಮಾತನಾಡಲಿ ಎಂದು ಜಿ.ಪರಮೇಶ್ವರ್ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿರುವುದು ತಿಳಿದುಬಂದಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿಯವರು, ಭಯೋತ್ಪಾದಕರು, ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬಂದು ನೆಲೆಸಲು ಕೇಂದ್ರ ಸರ್ಕಾರದ ಏಜೆನ್ಸಿಗಳು ಕಾರಣವೆಂಬ ಜಿ.ಪರಮೇಶ್ವರ್‌ರವರ ಹೇಳಿಕೆಗೆ ಪ್ರಹ್ಲಾದ ಜೋಶಿಯವರು ಕಿಡಿಕಾರಿದ್ದು ಗೃಹಮಂತ್ರಿಗಳು ರಾಹುಲ್ ಗಾಂಧಿಯವರ ರೀತಿಯಲ್ಲಿ ಮಾತಾನಾಡುವುದು ಸರಿಯಲ್ಲ. ನುಸುಳುಕೊರರು ಬರುವುದನ್ನು ತಡೆದಿರುವುದೇ ಬಿಜೆಪಿ ಸರ್ಕಾರ , ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ.