ಹುಬ್ಬಳ್ಳಿ :ಹಿಂದೂಗಳ ಸ್ಮಶಾಣವನ್ನು ನಾಶ ಮಾಡಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಮೋದ್‌ ಮುತಾಲಿಕ್‌ ತಮ್ಮ ಆಕ್ರೋಶವನ್ನು  ವ್ಯಕ್ತಪಡಿಸಿದ್ದಾರೆ.

ಇತ್ತ ನಾಗಮಂಗಲದಲ್ಲಿ ಹಿಂದೂ-ಮುಸ್ಲೀಂ ಬಣಗಳ ನಡುವೆ ಗಲಭೆ ಹೆಚ್ಚಾಗುತ್ತಿದ್ದರೆ, ಹುಬ್ಬಳ್ಳಿಯಲ್ಲಿ ಹಿಂದೂ ಧರ್ಮದವರ ಸ್ಮಶಾಣದ ಕಾಂಪೌಂಡನ್ನು ಒಡೆದುಹಾಕಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್‌ ಮುತಾಲಿಕ್.‌, ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿರುವ ಹಿಂದೂ ಧರ್ಮದವರ ಸ್ಮಶಾನದ ಕಾಂಪೌಂಡ್‌ನ್ನು ಒಡೆದುಹಾಕಿ ಇಂದಿರಾ ಕ್ಯಾಂಟೀನನ್ನು ನಿರ್ಮಿಸಿದ್ದಾರೆ ಎಂದು ಆರೋಪ ಮಾಡುತ್ತಾ ಕಾಂಗ್ರೆಸ್‌ ಶಾಸಕ ಪ್ರಸಾದ್ ಅಬ್ಬಯ್ಯನವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಕೇವಲ ಎರಡೇ ದಿನದಲ್ಲಿ ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಿದ್ದಾರೆ. ಈ ಕೂಡಲೇ ಇಂದಿರಾ ಕ್ಯಾಂಟೀನನ್ನು ತೆರವುಗೊಳಿಸಿ ಇಲ್ಲವಾದರೆ ಸ್ಥಳಾಂತರ ಮಾಡುವಂತೆ ಅಗ್ರಹ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *