ಬೆಂಗಳೂರು : ಬೆಂಗಳೂರು ನಗರದಲ್ಲಿ ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ನಡೆದಿದ್ದು ಈ ಕೂಡಲೇ ದೌರ್ಜನ್ಯ ಎಸಗಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾರ್ಮಿಕರ ಸಂಘ ಆಗ್ರಹ ಮಾಡಿರುವುದು ತಿಳಿದುಬಂದಿದೆ.
ಈ ರೀತಿಯ ಪೈಶಾಚಿಕ ದೌರ್ಜನ್ಯವೆಸಗಿದವರ ವಿರುದ್ಧ ಎಸ್ ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಎಫ್ ಐ ಆರ್ನ್ನು ದಾಖಲಿಸಿಕೊಂಡು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಎದುರು ಪೌರ ಕಾರ್ಮಿಕರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 11 ರಂದು ಬೆಂಗಳೂರಿನ ಪಶ್ಚಿಮ ಭಾಗದ ಬ್ಯಾಡರಹಳ್ಳಿಯಲ್ಲಿ ವಾರ್ಡ್ ಸಂಖ್ಯೆ 72ರಲ್ಲಿ ಕೆಲಸ ಮಾಡುತ್ತಿದ್ದ ಆರು ಜನರ ಮೇಲೆ ಹಲ್ಲೆ ಮಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ವಾಸಿಯಾದ ಚಂದ್ರ ಮತ್ತು ಅವರ ತಾಯಿ ಮಗ ಸೇರಿದಂತೆ ಬಿಬಿಎಂಪಿಯ ಮಹಿಳಾ ಪೌರಕಾರ್ಮಿಕರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿದ್ದಾರೆ. ಈ ವೇಳೆ ಪೌರಕಾರ್ಮಿಕರಿಗೆ ಗಾಯಗಳಾಗಿವೆ.
ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸದ ಪೊಲೀಸರ ವೈಫಲ್ಯ ಕುರಿತು ಬಿಬಿಎಂಪಿ ಕಾರ್ಮಿಕ ಸಂಘವೂ ದಿನಾಂಕ 18.9.2024 ರಂದು ಬಿಬಿಎಂಪಿ ಕಛೇರಿಯ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.