ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಇರುವವರೆಗೂ ಸಿಎಂ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲವೆಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ಬೈ ಎಲೆಕ್ಷನ್ ರಿಸಲ್ಟ್‌ನಿಂದ ಸಿಎಂ ಸ್ಥಾನ ಪಲ್ಲಟವಾಗುತ್ತದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ 136 ಸ್ಥಾನಗಳಲ್ಲಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಸೋತರೆ, ಸಿಎಂ ಸ್ಥಾನದ ಮೇಲೆ ಯಾವ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಇರುವವರೆಗೂ ಸಿಎಂ ಕುರ್ಚಿಯ ವಿಚಾರವಾಗಲೀ, ಸಿಎಂ ಬದಲಾವಣೆಯ ಚರ್ಚೆಯಾಗಲೀ ಸಾದ್ಯವಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ.ಸದ್ಯ ಸಿದ್ದರಾಮಯ್ಯನವರು ಅಧಿಕಾರ ನಡೆಸುತ್ತಿದ್ದಾರೆ.. ಅವರೇ ಮುಂದುವರೆಯುತ್ತಾರೆ ಎಂದು ಸಿಎಂ ಬದಲಾವಣೆಯ ವಿಚಾರಕ್ಕೆ ತೆರೆ ಎಳೆದಿದ್ದಾರೆ.