ಮೈಸೂರು: ನಮ್ಮ ಅಣ್ಣನಿಗೆ ಆಗದವರು ಷಡ್ಯಂತ್ರ ರೂಪಿಸಿ ಈ ಹಗರಣದಲ್ಲಿ ಸಿಕ್ಕಿಹಾಕಿಸಿದ್ದಾರೆ ಎಂದು ಸಿಎಂಸಿದ್ದರಾಮಯ್ಯನವರ ಸಹೋದರರಾದ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರೂ, ನಮ್ಮಣ್ಣ ಇಷ್ಟು ವರ್ಷದ ರಾಜಕೀಯ ವೃತ್ತಿಯಲ್ಲಿ ಇಂಥದ್ದೊಂದು ಕಪ್ಪುಚುಕ್ಕಿ ಬಂದಿರುವುದನ್ನು ನಾನು ನೋಡಿಲ್ಲ. ನಮ್ಮ ಅಣ್ಣನಿಗೆ ಆಗದವರು ಸಿದ್ದರಾಮಯ್ಯನವರನ್ನು ಮುಗಿಸಬೇಕೆಂದು ಸಂಚು ಮಾಡಿ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ.
ನಮ್ಮ ಹತ್ತಿರ ಇರೋದೆಲ್ಲಾ ಪಿತ್ರಾರ್ಜಿತ ಆಸ್ತಿ.ನಮ್ಮಣ್ಣ ಯಾವ ಜಮೀನನ್ನು ಖರೀದಿ ಮಾಡಿಲ್ಲ.ನಮ್ಮತ್ರ ಇರುವ ಜಮೀನನ್ನು ಡಿವೈಡ್ ಮಾಡಿಕೊಂಡಿದ್ದೇವೆ. ಈ ರೀತಿಯ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಿದರೂ ನಮ್ಮತ್ರ ಏನೂ ಹೇಳಿಕೊಂಡಿಲ್ಲ ಈ ವಿಚಾರವಾಗಿ ನಮ್ಮಣ್ಣ ತುಂಬಾ ನೊಂದಿದ್ದಾರೆ. ಅವರು ಯಾವ ತಪ್ಪನ್ನು ಮಾಡಿಲ್ಲವೆಂದಾದರೆ ರಾಜೀನಾಮೆ ಏಕೆ ಕೋಡ್ತಾರೆ ಎಂದಿದ್ದಾರೆ.