ಬೆಳಗಾವಿ: ಸಿಎಂ ಸಿದ್ದರಾಮಯ್ಯನವರ ಮೇಲೆ ಎಫ್‌ಐಆರ್ ದಾಖಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಮಾತನಾಡುವ ಭರದಲ್ಲಿ ನಾಲಿಗೆಯನ್ನು ಹರಿಬಿಟ್ಟಿದ್ದು, ಸಿಎಂ ಸಿದ್ದರಾಮಯ್ಯನವರು ಹಿಂದೂ ದೇವರ ಆಶೀರ್ವಾದವನ್ನು ತೆಗೆದುಕೊಂಡು ಮುಸ್ಲಿಮರ ಪರ ಕೆಲಸ ಮಾಡುತ್ತಾರೆ.ನಾವು ಹಿಂದೂಗಳು ನಮಗೆ ಎರಡು ಮಕ್ಕಳು ಎಂದರೆ ಮುಸ್ಲಿಮರು “ಹಮ್ ಪಾಂಚ್ ಹಮಾರಾ ಪಂಚಿಸ್” ಅಂತಾರೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾತನಾಡಿದ ಶಾಸಕ ಯತ್ನಾಳ್ ,ಸಿಎಂ ಸಿದ್ದರಾಮಯ್ಯನವರು ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಪೇಟ ಹಾಕಿಕೊಳ್ಳಲು ನಿರಾಕರಿಸುತ್ತಿದ್ದರು. ಆದರೀಗ ತಾಯಿ ಚಾಮುಂಡಿ ದರ್ಶನವನ್ನು ಹೇಗೆ ಮತ್ತು ಯಾಕೆ ಪಡೆಯುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಹಿಂದೂ ದೇವರ ಆಶೀರ್ವಾದವನ್ನು ಪಡೆದುಕೊಂಡು ಮುಸ್ಲೀಮರ ಪರವಾಗಿ ಕೆಲಸ ಮಾಡ್ತಾರೆ. ಎಸ್.ಸಿ.ಎಸ್.ಟಿ. ಸಮುದಾಯದ ಹಣವನ್ನು ಲೂಟಿ ಮಾಡಿದ್ದಾಯಿತು, ಹಾಲುಮಠದ ಸಮುದಾಯಕ್ಕೆ ಇಲ್ಲಿಯವರೆಗೂ ಏನೂ ಮಾಡಿಲ್ಲ, ವಾಲ್ಮೀಖಿ ನಿಗಮದ ಹಣವನ್ನು ಕಬಳಿಸಿದ್ದೀರಾ, ಆದರೂ ಮುಸ್ಲಿಂರಿಗೆ ಹತ್ತು ಸಾವಿರ ಕೋಟಿ ನೀಡುತ್ತೇವೆಂದು ಹೇಳಿಕೆಯನ್ನು ನೀಡುತ್ತಾರೆ .ಯಾರ ಅಪ್ಪನ ಆಸ್ತಿಯಿಂದ , ಯಾರ ಮನೆಯಿಂದ ಹಣ ಕೊಡುತ್ತೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಮದುವೆಯಾಗಿ ಎರಡು ಮಕ್ಕಳು ಮಾಡ್ತೀವಿ? ಆದರೆ ಮುಸ್ಲಿಮರು ಹಮ್ ಪಾಂಚ್ ಹಮಾರಾ ಪಂಚಿಸ್ ಅಂತಾರೆ. ಸಮಾನ ನಾಗರೀಕತೆ ಕಾನೂನು ಜಾರಿಗೆ ಬರಲಿದೆ ಆ ಜಾತಿ, ಈ ಜಾತಿ, ಎನ್ನುವುದನ್ನು ಬಿಟ್ಟು ನಾವೆಲ್ಲಾ ಹಿಂದೂಗಳು ಒಂದಾಗಬೇಕು ಎಂದಿದ್ದಾರೆ.