ಬೆಂಗಳೂರು: ಮುಡಾ ನಿವೇಶನವನ್ನು ವಾಪಸ್‌ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯ ನಿರ್ಧಾರದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮುಡಾ ಸೈಟ್‌ ವಾಪಸ್‌ ನೀಡುವುದರ ಕುರಿತು ಪತ್ನಿ ಬರೆದಿರುವ  ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಈ ವಿಚಾರದ ಕುರಿತು ಚರ್ಚಿಸಿರಲಿಲ್ಲ ಅವರ ಸ್ವಂತ ನಿರ್ಧಾರ. ತನ್ನ ಪತಿಗೆ ಇದರಿಂದ ತೊಂದರೆಯಾಗುತ್ತದೆ ಇದೇ ವಿಷಯವನ್ನಿಟ್ಟುಕೊಂಡು ನನ್ನ ಪತಿಯ ವಿರುದ್ದ ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಎಂದು ಮನನೊಂದು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ಪತ್ನಿ ಮನನೊಂದು ಮುಡಾ ಸೈಟನ್ನು ವಾಪಸ್‌ ನೀಡಿದ್ದಾರೆ.ನನ್ನ  ರಾಜಕೀಯ ವೃತ್ತಿ ಆರಂಭವಾದಾಗಿನಿಂದ ಎಂದಿಗೂ ಕೂಡಾ  ಅವರ ಹೆಸರು ಬಂದಿರಲಿಲ್ಲ. ಆದರೀಗ ದ್ವೇಷದ ರಾಜಕೀಯಕ್ಕೆ ಬಲಿಪಶುವಾಗಿ ತುಂಬಾ ಮಾನಸಿಕವಾಗಿ ನೋಂದು ಈ ನಿರ್ಧಾರವನ್ನು ತೆಗದುಕೊಂಡಿದ್ದಾರೆ. ಅವರ ಈ ನಿರ್ಧಾರವನ್ನು ತೆಗೆದುಕೊಂಡು ನನಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ. ನನ್ನ ಪತ್ನಿಯ ಸ್ವತಂತ್ರ್ಯ ನಿರ್ಧಾರಕ್ಕೆ ನನ್ನ ಗೌರವವಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *