ಹಾಸನ: ಮುಡಾ ಪ್ರಕರಣದಲ್ಲಿ ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌ ಎಲ್ಲಾ ಪಕ್ಷದವರ ಹಗರಣಗಳಿವೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಯಾಕೆ ಮೌನವಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದೇ ಪಕ್ಷ ಎಂದು ಬೆಟ್ಟು ಮಾಡಿ ಹೇಳುತ್ತಿಲ್ಲ ಬದಲಾಗಿ ಎಲ್ಲಾ ಪಕ್ಷದ ನಾಯಕರು ಹೊಂದಾಣೀಕೆಯ ರಾಜಕೀಯವನ್ನು ಮಾಡುತ್ತಿದ್ದಾರೆ.ಇಲ್ಲವಾಗಿದ್ದರೆ ಮುಡಾ ಹಗರಣದಲ್ಲಿ ಬೇರೆ ಪಕ್ಷದವರ ಕೈವಾಡವಿದೆ ಎಂದು ಹೇಳುತ್ತಿದ್ದರು. ಆದರೆ ಕಾಂಗ್ರೆಸ್ಸಿನವರು ಏಕೆ ಮಾತನಾಡುತ್ತಿಲ್ಲ. ವಿರೋದ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಕಾಂಗ್ರೆಸ್‌ನವರೂ ಒಂದು ಸಾಕ್ಷಿಯನ್ನಾದರೂ ನೀಡಿದ್ದಾರಾ? 40% ಹಗರಣದ ತನಿಖೆ ಮಾಡಿಸಿ ಪಿಎಸ್‌ಐ ತನಿಖೆಯನ್ನು ಏಕೆ ಮಾಡಿಸಿಲ್ಲ?, ನನ್ನ ಹತ್ತಿರ ದಾಖಲೆಗಳಿವೆ ಎಂದು ಹೇಳಿಕೆ ನೀಡಿರುವ ಪ್ರಿಯಾಂಕ್‌ ಖರ್ಗೆ ದಾಖಲೆಯನ್ನು ನೀಡಲಿಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *