ಪ್ರಜ್ವಲ್‌ ರೇವಣ್ಣನ ಪ್ರಕರಣಕ್ಕೆ ಭವಾನಿ ರೇವಣ್ಣನವರನ್ನು ಸೇರಿಸಿದ್ದು ಸರಿಯೇ? ಕಾಂಗ್ರೆಸ್ಸಿಗರ ಅಸ್ತ್ರವನ್ನೇ ಅವರ ಮೇಲೆ ಪ್ರಯೋಗಿಸಲಾಗಿದೆ. ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್‌ ಕಾಂಗ್ರೆಸ್‌ ನಾಯಕರ ವಿರುದ್ದ ಚಾಟಿ ಬೀಸಿದ್ದಾರೆ.

ಮುಡಾ ಹಗರಕ್ಕೆ ಸಿಎಂ ಸಿದ್ದರಾಮಯ್ಯವರ ಪತ್ನಿಯ ಮೇಲೆ ಆರೋಪ ಮಾಡಿರುವ ಬಿಜೆಪಿಗರ ನಡೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಪ್ರತಿಕ್ರಿಯಿಸಿದ ಆರ್. ಅಶೋಕ್‌,  ನಾನು ಸಿಎಂ ಸಿದ್ದರಾಮಯ್ಯನವರ ಪತ್ನಿ ಬರೆದ ಪತ್ರವನ್ನು ನೋಡಿದ್ದೇನೆ. ಯಾರೂ ಕೂಡಾ ರಾಜಕೀಯದಲ್ಲಿ ಕುಟುಂಬದವರ ಹೆಸರುಗಳನ್ನು ತರಬಾರದು.ಆದರೆ ಕಾಂಗ್ರೆಸ್ಸಿನವರು ಪ್ರಜ್ವಲ್‌ ರೇವಣ್ಣನ ಪ್ರಕರಣಕ್ಕೆ ಭವಾನಿ ರೇವಣ್ಣನವರ ಹೆಸರನ್ನು ತಂದಿದ್ದು ತಪ್ಪಲ್ಲವಾ? ಅದು ಅವರಿಗೆ ಸರಿ ಅನ್ನಿಸಿತ್ತಾ ಎಂದು ಪ್ರಶ್ನಿಸಿದ್ದಾರೆ.

ಇಷ್ಟು ದಿನಗಳ ಕಾಲ  ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಯಾಕೆ ಈಗ ಸೈಟ್ ವಾಪಸ್ ನೀಡುತ್ತಿದ್ದಾರೆ.ಈಗಾಗಲೇ ಲೇಟ್‌ ಆಗಿದೆ.  ರಾಜ್ಯದ ಜನರಿಗೆ ಯಾವ್ದು ಸರಿ? ಯಾವ್ದು ತಪ್ಪು? ಎಂದು ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಪ್ಪು ಮಾಡಿಲ್ಲವೆಂದಾದರೆ ಸೈಟುಗಳನ್ನು ಯಾಕೆ ವಾಪಸ್‌ ನೀಡಬೇಕಾಗಿತ್ತು. ಸೈಟುಗಳನ್ನು ಇಟ್ಟುಕೊಂಡೇ ಕಾನೂನನ್ನು ಎದುರಿಸಬೇಕಿತ್ತು ಎಂದಿದ್ದಾರೆ.

Leave a Reply

Your email address will not be published. Required fields are marked *