ಹಾವೇರಿ: ಮುಡಾ ಹಗರಣದಲ್ಲಿ ನನ್ನದು ಏನೂ ತಪ್ಪಿಲ್ಲ.ಆದರೂ ಬಿಜೆಪಿಯವರು ಸುಖಾ ಸುಮ್ಮನೆ ನನಗೆ ತೇಜೋವಧೆ ಮಾಡುತ್ತಿದ್ದಾರೆ.ಕೇವಲ 14 ಸೈಟಿಗಾಗಿ ನಾನು ರಾಜಕಾರಣ ಮಾಡಬೇಕಾ? ಎಂದು ಬಿಜೆಪಿಗರ ವಿರುದ್ದ ಹರಿಹಾಯ್ದಿದ್ದಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನನಾಡಿದ ಸಿಎಂ ಸಿದ್ದರಾಮಯ್ಯ, ನಾನು ಮತ್ತು ನನ್ನ ಕುಟುಂಬ ಯಾವುದೇ ರೀತಿಯ ತಪ್ಪು ಮಾಡಿಲ್ಲ.14 ಸೈಟ್‌ಗಾಗಿ ರಾಜಕಾರಣ ಮಾಡಬೇಕಾ? ಬಿಜೆಪಿಯವರು ನನ್ನ ಮೇಲೆ ಹಿಂದಿನಿಂದಲೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಹೇಳುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾರೆ.ನಾಡಿನ ಜನರ, ಮತದಾನ ಪ್ರಭುಗಳ ಪ್ರೀತಿ, ವಿಶ್ವಾಸಕ್ಕೆ ಮಣಿಯುತ್ತೇನೆ. ಅದನ್ನು ಬಿಟ್ಟು ಬಿಜೆಪಿಯವರ ಷಡ್ಯಂತ್ರಗಳಿಗೆ ಜಗ್ಗದೂ ಇಲ್ಲ, ಬಗ್ಗದೂಇಲ್ಲ. ನನ್ನ ಮೇಲೆ ಜನರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೂ ನಾನು ಬಿಜೆಪಿಗರ ತಂತ್ರಗಳಿಗೆ ಮಣೆಹಾಕುವುದಿಲ್ಲವೆಂದು ಹೇಳಿದ್ದಾರೆ.
40 ವರ್ಷದ ನನ್ನ ರಾಜಕೀಯ ವೃತ್ತಿಯಲ್ಲಿ ಒಂದು ಕಪ್ಪುಚುಕ್ಕೆಯಿಲ್ಲದ ರೀತಿಯಲ್ಲಿ ಆಡಳಿತ ನಡೆಸಿದ್ದೇನೆ.ಸಿದ್ದರಾಮಯ್ಯನವರನ್ನೂ ಯಾವ ರೀತಿ ಸೋಲಿಸಬೇಕು ಎಂದು ಯೋಚಿಸುತ್ತಿರುತ್ತಾರೆ. ಹಾಗೇಯೇ ನನ್ನ ಕುಟುಂಬದ ಮೇಲೆ ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ.ನಾನೇನಾದರೂ ದುಡ್ಡು ಮಾಡುವ ಯೋಚನೆಯಲ್ಲಿದ್ದರೆ ಬೇಕಾದಷ್ಟು ಹಣವನ್ನು ಮಾಡಬಹುದಿತ್ತು. ನನ್ನ ತಪ್ಪು ಏನಿಲ್ಲದಿದ್ದರೂ, ಸುಳ್ಳು ಆರೋಪ ಮಾಡಿ ತಂತ್ರಗಳನ್ನು ರೂಪಿಸಿ, ಷಡ್ಯಂತ್ರಗಳನ್ನು ಮಾಡಿ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್ ಮಾಡಿದ್ದಾರೆ.