ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಬೈಎಲೆಕ್ಷನ್ ಚುನಾವಣೆಗೆ ಬಹಿರಂಗ ಪ್ರಚಾರವನ್ನು ಮಾಡುವಂತಿಲ್ಲ ಬದಲಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ.ಇದೇ ಸಂದರ್ಭದಲ್ಲಿ ಎಂ.ಪಿ.ರೇಣುಕಾಚಾರ್ಯ ಎಲೆಕ್ಷನ್ ಪ್ರಚಾರ ಮಾಡುವುದಕ್ಕೂ ಸೈ, ಬೋಂಡಾ ಮಾಡುವುದಕ್ಕೂ ಸೈ ಎಂದು ಹೋಟೆಲೊಂದರಲ್ಲಿ ಮಿರ್ಚಿ ಬಜ್ಜಿಯನ್ನು ಮಾಡಿದ್ದಾರೆ.
ಸಂಡೂರು ತಾಲ್ಲೂಕಿನ ಕಳಸಿಗೆರೆ ಗ್ರಾಮದಲ್ಲಿ ನೆನ್ನೆ ಮತಯಾಚನೆ ಸಂದರ್ಭದಲ್ಲಿ ನಾಗೇಂದ್ರ ಗೌಡ ಅವರ ಹೋಟೆಲಿನಲ್ಲಿ ಅವರ ಅಪೇಕ್ಷೆ ಮೇರೆಗೆ ಮಿರ್ಚಿ ಮಾಡಿದ ಸಂದರ್ಭ ಎಂದು ತಮ್ಮ ಡಕ್ಸ್ ಖಾತೆಯಲ್ಲಿ ವಿಡೀಯೊ ಸಹಿತ ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ.