ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಕುರಿತು ನೀಡಿರುವ ಹೇಳಿಕೆ ಮತ್ತು ಪ್ರಧಾನಿ ಮೋದಿಯವರ ವಿರುದ್ಧದ ವಾಗ್ದಾಳಿ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಜವಾಬ್ದಾರಿಯಿಂದ ನುಣುಚಿಕೊಂಡ ಆರೋಪ: 2020ರಲ್ಲಿ ಲಡಾಖ್‌ನಲ್ಲಿ ಚೀನಾದೊಂದಿಗೆ ಸಂಘರ್ಷ ನಡೆದಾಗ, ಸೇನಾ ಮುಖ್ಯಸ್ಥರು ಮಾರ್ಗದರ್ಶನ ಕೇಳಿದಾಗ ಪ್ರಧಾನಿ ಮೋದಿ ಅವರು ಜೋ ಉಚಿತ್ ಸಮ್‌ಜೋ ವೋ ಕರೋ” (ನಿಮಗೆ ಸರಿ ಕಂಡಿದ್ದನ್ನು ಮಾಡಿ) ಎಂದು ಹೇಳಿದ್ದರು ಎಂಬುದು ರಾಹುಲ್ ವಾದ. ಇದು ಪ್ರಧಾನಿಯವರು ತಮ್ಮ ಜವಾಬ್ದಾರಿಯನ್ನು ಸೇನೆಯ ಮೇಲೆ ಹಾಕಿ ನುಣುಚಿಕೊಂಡಿದ್ದಾರೆ ಎಂಬುದು ಅವರ ವಿಶ್ಲೇಷಣೆ.

ಸಂಸತ್ತಿನಲ್ಲಿ ಮುಖಾಮುಖಿಗೆ ಸವಾಲು: ಪ್ರಧಾನಿ ಮೋದಿಯವರು ಸಂಸತ್ತಿಗೆ ಬರಲು ಹೆದರುತ್ತಿದ್ದಾರೆ ಮತ್ತು ತಾವು ಜನರಲ್ ನರವಣೆ ಅವರ ಪುಸ್ತಕದ ಪ್ರತಿಯನ್ನು ಪ್ರಧಾನಿಯವರಿಗೆ ಖುದ್ದಾಗಿ ಹಸ್ತಾಂತರಿಸಲು ಸಿದ್ಧರಿದ್ದೇವೆ ಎಂದು ರಾಹುಲ್ ಸವಾಲು ಹಾಕಿದ್ದಾರೆ. ಪುಸ್ತಕದಲ್ಲಿರುವ ಸತ್ಯ ಹೊರಬರಲಿದೆ ಎಂಬ ಭಯ ಸರ್ಕಾರಕ್ಕಿದೆ ಎಂಬುದು ಅವರ ಆರೋಪ.

 ಪುಸ್ತಕ ಪ್ರಕಟಣೆಗೆ ತಡೆ: ಈ ಪುಸ್ತಕವು ಸೇನೆಯ ಸೂಕ್ಷ್ಮ ವಿಚಾರಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಸರ್ಕಾರ ಅದರ ಪ್ರಕಟಣೆಗೆ ತಡೆ ನೀಡಿದೆ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಇದನ್ನು “ಸತ್ಯವನ್ನು ಮುಚ್ಚಿಡುವ ಪ್ರಯತ್ನ” ಎಂದು ಬಣ್ಣಿಸುತ್ತಿದ್ದಾರೆ.

Leave a Reply

Your email address will not be published. Required fields are marked *