ಬೆಂಗಳೂರು: ಭೂಮಿಗೆ ಬಿದ್ದ ನೀರನ್ನು ಮತ್ತೆ ಆಕಾಶಕ್ಕೆ ವಾಪಸ್ ಕಳಿಸಲು ಸಾದ್ಯವಿಲ್ಲ. ಭೂಮಿ ಮೇಲೆ ಬಿದ್ದ ನೀರು ಹರಿದುಕೊಂಡು ಕೆರೆ, ಕುಂಟೆ, ನದಿಗಳಿಗೆ ಸೇರಬೇಕು ಎಂದು ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಅವಾಂತರದ ಕುರಿತು ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಅಕ್ಟೋಬರ್ ತಿಂಗಳಲ್ಲಿ ಮಳೆಯಾಗಿರುವುದನ್ನು ನೀವು ಯಾವಾತ್ತಾದರೂ ನೋಡಿದ್ದೀರಾ? ಬಾರೀ ಮಳೆಯ ಕಾರಣದಿಂದ ವ್ಯವಸ್ಥೆ ಸರಿಯಾಗಿದ್ದರೂ ಕೂಡಾ ಅಸ್ತವ್ಯಸ್ತವಾಗುತ್ತದೆ . ನ್ಯೂಯಾರ್ಕ್ ನಲ್ಲಿ ಹೆಚ್ಚು ಮಳೆ ಆಗಲ್ವಾ, ವಾಷಿಗ್ಟಂನ್ನಲ್ಲಿ ಆಗಲ್ವಾ, ಇಂಗ್ಲೆಂಡಿನಲ್ಲಿ ಆಗಲ್ವಾ, ಲಂಡನ್ ಆಗಲ್ವಾ, ಅಲ್ಲಿಯೂ ಆಗುತ್ತೆ. ಅದನ್ನು ಮ್ಯಾನೇಜ್ ಮಾಡ್ಕಂಡು ಹೋಗ್ತಾಯಿರಬೇಕು ಎಂದಿದ್ದಾರೆ.