ಆಟ ಮನುಷ್ಯನ ಬೆಳವಣಿಗೆ ಪೂರಕವಾಗಿ ಆದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಅದು ಇಂದಿಗೂ ಅನೇಕ ರೂಪಗಳಲ್ಲಿ ತನ್ನ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ. ಅದರಲ್ಲಿ ಡಿಜಿಟಲ್ ಗೇಮ್ಸ್ ಅಂದರೆ, ಮೊಬೈಲ್, ಕಂಪ್ಯೂಟರ್ ಮತ್ತು ಸ್ಮಾರ್ಟ್ ಡಿವೈಸ್‌ಗಳ ಮೂಲಕ ಆಡಲಾಗುವ ಆಟಗಳ ಬಗ್ಗೆ ಒಂದಷ್ಟು ಕಿರುಪರಿಚಯ ಮಾಡಿಕೊಡುವುದು ನನ್ನ ಉದ್ದೇಶ. ಮೊದಲನೇ ಸಂಚಿಕೆಯಲ್ಲಿ ನಿಮಗೆ ಮೈನ್‌ಕ್ರಾಫ್ಟ್ ಬಗ್ಗೆ ಪರಿಚಯಿಸುತ್ತೇನೆ.
ಮೈನ್‌ಕ್ರಾಪ್ಟ್ ಇದೊಂದು ಅದ್ಬುತವಾದ ಗೇಮ್. ನೀವೆಲ್ಲಾ ಇದನ್ನು ಗಮನಿಸಿರಬಹುದು. ಈ ಗೇಮನ್ನು 18 ನವೆಂಬರ್ 2011ರಂದು ಮಾರ್ಕಸ್ ಪರ್ಸನ್ ಮತ್ತು ಜೆನ್ಸ್ ಬರ್ಗೆನ್‌ಸ್ಟನ್ ಇವರಿಬ್ಬರು ಸ್ವೀಡಿಷ್ ದೇಶದ ವಿಡೀಯೋ ಗೇಮ್ ಪ್ರೋಗ್ರಾಮ್‌ಗಳು ಕಂಡುಹಿಡಿದರು. ಈ ಗೇಮನ್ನು ನೀವು ನಿಮ್ಮ ಕಂಪ್ಯೂಟರ್ , ಟ್ಯಾಬ್, ಟಿವಿ, ಸ್ಮಾರ್ಟ್‌ವಾಚ್ ಮತ್ತು ಮೊಬೈಲ್‌ಗಳಲ್ಲಿಯೂ ಆಡಬಹುದು. ಇದನ್ನು ಆಡಲು ಇಂಟರ್‌ನೆಟ್‌ನ ಅಗತ್ಯವಿದೆ. ಅಲ್ಲದೆ, ಹಲವಾರುಬಾರಿ ದುಡ್ಡನ್ನು ಕೊಟ್ಟು ಕೂಡಾ ಈ ಆಟವನ್ನ ಆಡಬೇಕಾಗುತ್ತದೆ. ಹೀಗೆ ದುಡ್ಡುಕೊಟ್ಟು ಹಾಡುವ ಗೇಮ್ಸ್‌ಗಳನ್ನು ಪ್ರೋ ಗೇಮ್ಸ್ ಅಥವಾ ಪ್ರೀಮಿಯಮ್ ಗೇಮ್ಸ್ ಎನ್ನುತ್ತಾರೆ. ಈ ಪ್ರೋ ಗೇಮ್ಸ್‌ಗಳಲ್ಲಿ ಉತ್ತಮವಾದ ಸಾಧ್ಯತೆಗಳಿದ್ದು, ಆಟದ ಮಜವೇ ಬೇರೆಯದ್ದಾಗಿರುತ್ತದೆ. ಆದರೆ, ಉಚಿತ ಗೇಮ್ಸ್‌ಗಳು ಲಿಮಿಟ್‌ನಲ್ಲಿದ್ದು, ಒಂದಷ್ಟು ಹಂತದವರೆಗೆ ಮಾತ್ರವೇ ತಲುಪಿ ವಾಪಸ್ ಹೋಗಬೇಕಾಗುತ್ತದೆ.
ಮೈನ್‌ಕ್ರಾಫ್ಟ್ ಗೇಮ್‌ನ ದರಪಟ್ಟಿಯ ವಿವರಗಳು ಹೀಗಿವೆ:
ಆಂಡ್ರಾಯ್ಡ್ ಮೊಬೈಲ್ಗೆ 650 ರೂಪಾಯಿಯಾದರೆ, ಐ.ಓ.ಎಸ್. ಅಂದರೆ ಆಪಲ್ ಕಂಪೆನಿಯ ಮೊಬೈಲ್‌ಗಳಿಗೆ 600/- ರೂ. ಹಾಗೂ ಈ ಗೇಮನ್ನು ಕಂಪ್ಯೂಟರ್‌ಗಳಲ್ಲಿ ಆಡಲು 2.190.64 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಕೆಲವೊಂದು ಹ್ಯಾಕರ್‌ಗಳು ಪ್ರೋ ಗೇಮನ್ನು ಕ್ರಾಕ್ (ಬೀಗ ಒಡೆದು) ಮಾಡಿಯೂ ಆಡುತ್ತಾರೆ. ಇದು ಇಲ್ಲೀಗಲ್! ಅಂದರೆ, ಕಾನೂನುಬಾಹಿರ. ಡಿಜಿಟಲ್ ಕ್ರೈಂ.
ಇನ್ನೊಂದು ವಿಶೇಷತೆಯೆಂದರೆ, ಈ ಗೇಮನ್ನು ಸ್ಪೀಡನ್ ದೇಶದಲ್ಲಿ 13 ವರ್ಷದ ಮಕ್ಕಳಿಗೆ ಮೈನ್‌ಕ್ರಾಫ್ಟ್ ಪಾಠವನ್ನು ಕಡ್ಡಾಯ ಮಾಡಲಾಗಿದೆ. ಯಾಕೆಂದರೆ, ಈ ಗೇಮಿನಲ್ಲಿ ಸೃಜನಶೀಲತೆಗೆ ದಾರಿಮಾಡಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಮಕ್ಕಳ ಬೆಳವಣಿಗೆಯಲ್ಲಿನ ಹಲವಾರು ಸಮಸ್ಯೆಗೆ ಪರಿಹಾರ ಮತ್ತು ವ್ಯವಸ್ಥೆಯ ಬಗೆಗಿನ ಚಿಂತನೆಗಳನ್ನು ಹುಟ್ಟಲು ಈ ಆಟವು ಉತ್ತೇಜಿಸುತ್ತದೆ. ಈ ಗೇಮಿನಿಂದ ಸಹನೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಡಿಜಿಟಲ್ ಪಾರತ್ಯವನ್ನು ಕಲಿಯಬಹುದಾಗಿದೆ.
ಈ ಗೇಮಿನ ವಿಶೇಷತೆಗಳೆಂದರೆ: ಚಿನ್ನ, ಬೆಳ್ಳಿ, ಕಬ್ಬಿಣ, ತಾಮ್ರ, ವಜ್ರದಂತಹ ಲೋಹಗಳಿಂದ ಗುದ್ದಲಿ, ಸನಿಕೆ, ಕೊಡಲಿ, ಕತ್ತರಿ, ದಿಕ್ಸೂಚಿಗಳಂತಹ ಹಲವಾರು ಉಪಕರಣಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಈ ಗೇಮಿನಲ್ಲಿ ಹಸು, ಕುರಿ, ಮೇಕೆ, ಬೆಕ್ಕು, ನಾಯಿ, ಕುದುರೆ, ಪಾಂಡ, ಹಿಮಕರಡಿ, ಒಂಟೆಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ ಹಲವಾರು ಪಕ್ಷಿಗಳನ್ನು ಕೂಡಾ ಕಾಣಬಹುದಾಗಿದೆ .ಅದರ ಜೊತೆಗೆ ಮೀನು, ಆಮೆಯಂತಹ ಜಲಚರಜೀವಿಗಳನ್ನು ಕಾಣಬಹುದು.
ಇದಿಷ್ಟೇ ಅಲ್ಲದೆ, ಈ ಗೇಮಿನಲ್ಲಿ ನಾವು ವಿಚಿತ್ರವಾದ ಜೀವಿಗಳನ್ನು ನೋಡಬಹುದು. ಕ್ರೀಪರ್ ಪಟಾಕಿಯ ಹಾಗೆ ನಮ್ಮ ಹತ್ತಿರ ಬಂದು ಡಮ್ ಎಂದುಬಿಟ್ಟರೆ, ಇದರಿಂದ ನಾವು ಸಾಯಲೂಬಹುದು. ಇನ್ನೂ ಸ್ಕೆಲಿಟನ್ ರೀತಿಯ ಆಕೃತಿಗಳು ಅಡ್ಡಬಂದು ಬಿಲ್ಲುಬಾಣಗಳಿಂದ ನಮ್ಮನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತವೆ. ಅದೇ ರೀತಿ ಜಾಂಬಿಗಳೂ ಬರುತ್ತವೆ. ಈ ಜಾಂಬಿಗಳ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಹಲವಾರು ಸಿನಿಮಾಗಳಲ್ಲೆಲ್ಲಾ ನೋಡಿರ್ತೀರಾ. ಇವುಗಳು ಮನುಷ್ಯನನ್ನು ಕಚ್ಚಿ ಅವರನ್ನೂ ಕೂಡಾ ತಮ್ಮಂತೆ ಮಾಡಿಕೊಳ್ಳಲು ಯತ್ನಿಸುತ್ತವೆ. ಆದರೆ ಈ ಗೇಮಿನಲ್ಲಿ ನಾವು ಅವರ ತರಹ ಆಗುವುದಿಲ್ಲ! ಏಕೆಂದರೆ ಅವು ಕಚ್ಚಿದ ತಕ್ಷಣ ನಾವು ಸಾಯುತ್ತೇವೆ ಅಷ್ಟೇ. ಇನ್ನೂ ಹಲವಾರು ರಾಕ್ಷಸರು ಧುತ್ತನೆ ಎದುರಾಗುತ್ತಾರೆ. ನಾವು ರಾತ್ರಿಯ ವೇಳೆ ಬೆಡ್ ತಯಾರಿಸಿಕೊಂಡು ಮಲಗಬೇಕಾಗುತ್ತದೆ. ಇನ್ನೂ ಬೆಳಗ್ಗೆಯಾಗುತ್ತಿದ್ದಂತೆ ನಮ್ಮ ರಕ್ಷಣೆಗೆ ಕವಚಗಳನ್ನೂ, ಕತ್ತಿಗಳನ್ನೂ, ನಮಗೆ ಅಗತ್ಯವಿದ್ದರೆ ಬೇರೆ ರೀತಿಯ ಆಯುಧಗಳನ್ನು ನಾವೇ ತಯಾರಿಸಿಕೊಂಡು ಬಳಸಬೇಕಾಗುತ್ತದೆ.
ಹಾಗೆಯೇ, ಈ ಗೇಮಿನಲ್ಲಿ ವ್ಯವಸಾಯವನ್ನ ಮಾಡಬಹುದಾಗಿದ್ದರಿಂದ ನಮಗೆ ಬೇಕಾದಂತಹ ಬೆಳೆಗಳನ್ನು ಬೆಳೆಯಬಹುದು. ಇದರಿಂದ ನಮಗೆ ಬೇಕಾದ ಆಹಾರ ದೊರೆಯುತ್ತದೆ. ಈ ಗೇಮಿನಲ್ಲಿ ಗುಹೆಗಳಿಗೆ ಹೋಗಿ ನಮಗೆ ಬೇಕಾದಂತಹ ಲೋಹಗಳನ್ನ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಹುಡುಕಿಕೊಂಡು ತೆಗೆದುಕೊಂಡು ಬರಬೇಕಾಗುತ್ತದೆ. ಅಲ್ಲದೆ, ಈ ಗೇಮಿನಲ್ಲಿ ಒಂದು ಹಳ್ಳಿಯೂ ಇರುತ್ತದೆ, ಅಲ್ಲಿ ಮನೆಗಳು, ಜನರು ಇರುತ್ತಾರೆ . ಈ ಜನರನ್ನು ರಕ್ಷಿಸಲು ಕಬ್ಬಿಣದಿಂದ ಮಾಡಿರುವ ಗೊಲೆಮ್ ಎನ್ನುವ ರಕ್ಷಕನಿರುತ್ತಾನೆ.
ಇನ್ನು ಈ ಗೇಮಿಗೆ IMDB 8.5/10 ರೇಟಿಂಗ್‌ನ್ನು ನೀಡಿದೆ.
ಕಡೆಯದಾಗಿ ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏನೆಂದರೆ, ಯಾವುದೇ ದೇಶದಲ್ಲಿರುವ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸಿ TNT ಎಂಬ ಅಣು ಬಾಂಬ್‌ನಿಂದ ಅಥವಾ ಇನ್ನೂ ಯಾವುದೇ ರೀತಿಯಲ್ಲದಾರೂ ನಾಶ ಮಾಡಿ ಆ ವಿಡಿಯೋವನ್ನು ಯೂಟ್ಯೂಬ್ ಅಥವಾ ಇನ್ನು ಯಾವುದಾದರೂ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದರೆ ದೇಶದ್ರೋಹದ ಹೆಸರಿನಲ್ಲಿ ನಮ್ಮ ಮೇಲೆ ಕೇಸ್ ಹಾಕಬಹುದು. ಆದ್ದರಿಂದ 5 ವರ್ಷ ಕಠಿಣ ಜೈಲು ಶಿಕ್ಷೆಯಾಗಬಹುದು. ಆದ್ದರಿಂದ ಜಾಗೃತೆಯಿಂದ ಮಾನವೀಯತೆಯ ಮನಸ್ಸಿನಿಂದ ಗೇಮನ್ನು ಆಡಿ ಖುಷಿಯಾಗಿರಿ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಗೇಮ್ ಬಗ್ಗೆ ತಿಳಿದುಕೊಳ್ಳೋಣ.
ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು.
–ಚೆಗುವಾರ
ಚೆಗುವಾರ ಯಲಹಂಕ ಬಳಿಯ ಹುಣಸಮಾರನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ.
ಗೇಮ್ ಗಳ ಬಗ್ಗೆ ಸುಂದರವಾಗಿ ಬರೆದಿದ್ದಾರೆ. ಎಷ್ಟೋ ಮಾಹಿತಿ ಲಭ್ಯವಾಗಿದೆ. ತುಂಬಾ ಧನ್ಯವಾದಗಳು. ನಿಮ್ಮ ಲೇಖನಗಳ ಸರಣಿ ಹೀಗೆ ಮುಂದುವರಿಯಲಿ.
Very good essay written on Minecraft. Improve your skill more and continue writing more and more articles like this. Best of luck May God bless you
Please correct school name next time
SJP high school, Hunasamaranahalli