ಹೆಚ್.ಡಿ.ಕೋಟೆ (ಮೈಸೂರು): ಭಾರತ ದೇಶದಲ್ಲಿ ಸಂವಿಧಾನ ದಿನಾಚರಣೆಯನ್ನು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬ ಬರುವ ಮುಂಚೆಯೇ ಇದಕ್ಕೆ ಒಂದಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಉದಾಹರಣೆಗೆ ನೃತ್ಯಗಳು, ಹಾಡು, ನಾಟಕ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಹಾಗೆಯೇ ಹೆಚ್.ಡಿ.ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ NACC ಬಳಗವು ಈ ವರ್ಷದ ಸಂವಿಧಾನದ ದಿನಾಚರಣೆಯ ಪ್ರಯುಕ್ತ ಹಲವಾರು ತಂಡಗಳಿಂದ ಟೆನಿಸ್‌ ಮತ್ತು ಕ್ರಿಕೆಟ್‌ ಪಂದ್ಯಗಳನ್ನು ಆಡಿಸಿ ಬಹುಮಾನವನ್ನು ನೀಡುವ ಕಾರ್ಯಕ್ರಮವನ್ನು ಸತತ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ʻಮಹಾನಾಯಕ ಕ್ರಿಕೆಟ್‌ ಕಪ್ʼ ಎಂಬ ಶೀರ್ಷಿಕೆಯಡಿ ತಾಲ್ಲೂಕು ಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ದಿನಾಂಕ 27.01.2023 ರಿಂದ 31.01.2023 ರವರೆಗೆ ಆಯೋಜಿಸಲಾಗಿದ್ದು ಆಸಕ್ತಿಯುಳ್ಳ ತಂಡಗಳು ಮುಂಚಿತವಾಗಿ ಅಂದರೆ ದಿನಾಂಕ 25.01.2023 ರ ಒಳಗೆ ತಮ್ಮ ತಂಡದ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಾಗಿ ಎಲ್ಲಾ ಕ್ರೀಡಾ ಆಸಕ್ತಿಯ ಕ್ರೀಡಾಭಿಮಾನಿಗಳಲ್ಲಿ ವಿನಂತಿಸಿಕೊಳ್ಳಲಾಗಿದೆ.

ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ವಿಶೇಷ ಸೂಚನೆಗಳು
* ಒಂದು ತಂಡದಲ್ಲಿ 11 ಆಟಗಾರರೂ ಇರುತ್ತಾರೆ. ಎಲ್ಲಾ ಆಟಗಾರರೂ ಕೂಡಾ ಒಂದೇ ಊರಿನವರಾಗಿರಬೇಕು.
* ಅನುಮಾನಾಸ್ಪದ (ಥ್ರೋ) ಬೋಲಿಂಗ್‌ ಗೆ ಅವಕಾಶವಿರುವುದಿಲ್ಲ.
* ಎಲ್ಲಾ ಪಂದ್ಯಗಳಂತೆಯೇ ಅಂಪೈರ್‌ ತೀರ್ಮಾನವೇ ಅಂತಿಮ ತೀರ್ಮಾನ. ಒಂದು ವೇಳೆ ಗೊಂದಲವಾದಲ್ಲಿ ಕಮಿಟಿಯ ತೀರ್ಮಾನಕ್ಕೆ ಬದ್ಧರಾಗಿರಬೇಕು.
* ಭಾಗವಹಿಸುವ ಪ್ರತಿ ತಂಡಕ್ಕೂ NACC ತಂಡದ ವತಿಯಿಂದ ನೆನಪಿನ ಕಾಣಿಕೆ ಇದ್ದೆ ಇರುತ್ತದೆ.
* ಪ್ರತಿ ಪಂದ್ಯಕ್ಕೂ ಪಂದ್ಯ ಪುರುಶೋತ್ತಮ ಪ್ರಶಸ್ತಿ ಹಾಗೂ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಇಬ್ಬರು ಆಟಗಾರರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ (ಅತ್ಯುತ್ತಮ ಬ್ಯಾಟ್ಸ್‌ ಮನ್‌, ಅತ್ಯುತ್ತಮಬೌಲರ್)‌ ಇರುತ್ತದೆ.
* ಈ ಪಂದ್ಯಾವಳಿಯು ಹೆಚ್.ಡಿ.ಕೋಟೆ ತಾಲ್ಲೂಕು ಹಾಗೂ ಸರಗೂರು ತಾಲ್ಲೂಕಿನ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ.
* ಒಂದು ವೇಳೆ ಯಾವುದೇ ಒಬ್ಬ ಆಟಗಾರನೂ ಅನ್ಯ ಗ್ರಾಮ. ತಾಲ್ಲೂಕು ಆಟಗಾರನಾಗಿ ಕಂಡುಬಂದಲ್ಲಿ ಆ ಆಟಗಾರ ಆಡಿದ ಪಂದ್ಯದಲ್ಲಿಸೋತ ತಂಡಕ್ಕೆ ಅವಕಾಶವನ್ನು ನೀಡಲಾಗುವುದು.
* ನಮ್ಮ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಒಂದೇ ಇಲಾಖೆಯ 11 ಜನರ ಒಂದು ತಂಡವನ್ನು ಕಟ್ಟಿಕೊಂಡು ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. (ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುರುತಿನ ಚೀಟಿ ಕಡ್ಡಾಯವಾಗಿರಬೇಕು).
* ಪ್ರತಿಪಂದ್ಯವೂ 6 ಒವರ್‌ಗಳಿಗೆ ಸೀಮಿತವಾಗಿದ್ದು ಕಾಲಾವಕಾಶ ಕಡಿಮೆಇದ್ದಲ್ಲಿ ಓವರ್‌ ಗಳನ್ನು ಕಡಿಮೆಮಾಡಲಾಗುವುದು.
* ಸೆಮಿ ಫೈನಲ್‌ ಹಾಗೂ ಫೈನಲ್‌ ಪಂದ್ಯವು 8 ಓವರ್‌ಗಳಿಗೆ ಸೀಮಿತವಾಗಿರುತ್ತದೆ.
* ಪ್ರತಿ ಆಟಗಾರರಗುರುತಿನ ಆಧಾರಗಳಾದ ವೋಟರ್‌ ಐಡಿ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್ಗಳು ಕಡ್ಡಾಯವಾಗಿ ತೆಗೆದುಕೊಂಡಿರಬೇಕು ಯಾಕೆಂದರೆ ಸಮಿತಿಯು ಯಾವ ಸಮಯದಲ್ಲಾದರೂ ನಿಮ್ಮ ಬಳಿ ಕೇಳಬಹುದು.
* ಯಾವುದೇ ರೀತಿಯ ಅನುಚಿತ ವರ್ತನೆಗಳಿಗೆ ಅವಕಾಶವಿರುವುದಿಲ್ಲ. ಎಲ್ಲರೂ ಕೂಡಾ ಕ್ರೀಡೆಯನ್ನು ರಂಜಿಸಿ ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು

ಬಹುಮಾನದ ವಿವರಗಳು ಹೀಗಿವೆ
ಪ್ರಥಮ ಬಹುಮಾನ ರೂ.25 ಸಾವಿರ ಮತ್ತು ಆಕರ್ಷಕ ಮಹಾನಾಯಕ ಟ್ರೋಫಿ.
ದ್ವಿತೀಯ ಬಹುಮಾನ ರೂ. 15 ಸಾವಿರ ಮತ್ತು ಆಕರ್ಷಕ ಮಹಾನಾಯಕ ಟ್ರೋಫಿ.
ಪ್ರವೇಶ ಶುಲ್ಕ- 1500

ಆಟದ ಮೈದಾನದ ಸ್ಥಳ: ಹೆಲಿಕ್ಯಾಪ್ಟರ್‌ ಮೈದಾನ, ನೇರಳೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನವರನ್ನು ಸಂಪರ್ಕಿಸಿ
Chikkadevappa – 9902625433
Arjuna – 8861993833
Chetan – 9380064950
Suresh – 9902900458
Ravi (lingaraju) – 7829430583
Pramod – 9632319635

Leave a Reply

Your email address will not be published. Required fields are marked *