ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದರು.ಈ ವಿಚಾರದ ಕುರಿತು ವಿಪಕ್ಷ ನಾಯಕ ಆರ್ ಅಶೋಕ್‌ ಟೀಕಿಸಿದ್ದಾರೆ.

ಲೋಕಾಯುಕ್ತ ವಿಚಾರಣೆ ಎದುರಿಸುವ ವಿಷಯದ ಕುರಿತು ಮಾತನಾಡಿದ ಆರ್‌ ಅಶೋಕ್‌, ಸಿಎಂ ಸಿದ್ದರಾಮಯ್ಯನವರು ನನ್ನ ರಾಜಕೀಯ ಆಡಳಿತದ ಅವಧಿಯಲಿ “ನನ್ನ ಮೇಲೆ ಒಂದು ಕಪ್ಪು ಚುಕ್ಕಿ ಇಲ್ಲ” ನನ್ನದು ತೆರೆದ ಪುಸ್ತಕ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಅವರ ಪುಸ್ತಕ ತೆರೆದರೆ ಬರೀ ಕಪ್ಪು ಚುಕ್ಕಿಗಳೇ ತುಂಬಿವೆ. ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಲೋಕಾಯುಕ್ತ ವಿಚಾರಣೆಯೂ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ.ಇವರು ವಿಚಾರಣೆಯನ್ನು ಎದುರಿಸಲು ಇವರೇ ಟೈಮ್‌ ಟೇಬಲ್‌ ತಯಾರಿಸಿದ್ದಾರಂತೆ. ಬೆಳಗ್ಗೆ ವಿಚಾರಣೆ ನಡೆಸುವುದಂತೆ ಮದ್ಯಾಹ್ನ ಪ್ರಚಾರ ಮಾಡುವುದಂತೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಚಾರ ನಡೆದಿರುವ ಪರಿಣಾಮ ಸಚಿವ ಆರ್‌ ಬಿ ತಿಮ್ಮಾಪುರ ವಾರಕ್ಕೆ 18 ಕೋಟಿ ರೂಗಳ ಹಪ್ತಾವನ್ನು ವಸೂಲು ಮಾಡ್ತೀದ್ದಾರಂತೆ ಎಂದು ರಾಜ್ಯಪಾಲರಿಗೆ ಮಧ್ಯದಂಗಡಿ ಮಾಲಿಕರೇ ದೂರನ್ನು ನೀಡಿದ್ದಾರೆ.ಹಾಗಾಗಿ ಈ ಅಬಕಾರಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Leave a Reply

Your email address will not be published. Required fields are marked *