*5000 ಕ್ಕೂ ಹೆಚ್ಚು ಜನರ ಸಾವು *10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ
ಲಿಬಿಯಾ ದೇಶವು ಡೇನಿಯಲ್ ಚಂಡಮಾರುದ ಹೊಡೆತಕ್ಕೆ ತತ್ತರಿಸಿ 3000 ಕ್ಕೂ ಹೆಚು ಜನರನ್ನು ಬಲಿ ಪಡೆದಿದೆ ಎಂದು ಲಿಬಿಯಾ ಮಾಧ್ಯಮಗಳು ಸ್ಪಷ್ಟಪಡಿಸಿವೆ.
ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣಾ ಕಾರ್ಯ ಮತ್ತು ನಾಪತ್ತೆಯಾದವರ ಹುಡುಕಾಟ ಕಾರ್ಯವನ್ನು ತೀವ್ರಗತಿಯಲ್ಲಿ ನಡೆಯುತ್ತಿದ್ದು ಹಲವು ದೇಶದ ರಕ್ಷಣ ಪಡೆಗಳು ಕೂಡ ಕಾರ್ಯ ನಿರ್ವಹಿಸುತ್ತಿವೆ. ಡರ್ನಾ ನಗರದಲ್ಲಿ 1500 ಸಾವಿರ ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಇವೆ ಎಂದು ಸಂಬಂಧಪಟ್ಟಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡರ್ನಾ ನಗರದ ಲಕ್ಷಕ್ಕೂ ಹೆಚ್ಚು ಜನ ಆಶ್ರಯ ಕಳೆದುಕೊಂಡಿದ್ದಾರೆ, ವಾಹನಗಳು ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದಿರುವುದು, ಗಿಡಮರಗಳು ಧರೆಗೆ ಉಳಿರುವ ದೃಶ್ಯಗಳು ಕಂಡುಬರುತ್ತಿವೆ ಎಂದು ವರದಿಯಾಗಿದೆ.