ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಜನ್ 11 ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಕ್ರೀಯಾಶೀಲವಾಗಿ ಮೋಜು ಮಸ್ತಿ ಮಾಡಿಕೊಂಡು ಜನರನ್ನು ರಂಜಿಸುತ್ತಿದ್ದರು. ಆದರೆ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ಧ ಬಳಕೆ ಮಾಡಿ ನಿಂದಿಸಿ ಮನೆಯಿಂದ ಔಟ್ ಆದರು.
ಬಿಗ್‌ಬಾಸ್ ಸೀಜನ್ 11 ಶುರುವಾಗಿದ್ದನಿಂದಲೂ ಲಾಯರ್ಜಗದೀಶ್ ದೊಡ್ಮನೆಯಲ್ಲಿ ತನ್ನದೇ ಆದ ಇಮೇಜ್ ಕ್ರಿಯೆಟ್ ಮಾಡಿಕೊಂಡಿದ್ದರು.ಒಂದಿಲ್ಲೊಂದು ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ನೋಡುಗರ ಕಣ್ಣಲ್ಲಿ ಕ್ರಶ್ ಆಫ್ ಕರ್ನಾಟಕದ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.
ಬಿಗ್‌ಬಾಸ್ ಮನೆಯಿಂದ ಹೊರಬಂದ ಲಾಯರ್ ಜಗದೀಶ್‌ರವರು ಮತ್ತೊಂದು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೆ. ಹೌದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕ ಎಂಟ್ರಿಯಾಗುತ್ತಿದ್ದಂತೆ ನಟ ದರ್ಶನ್ ನಟನೆಯ ಸೂಪರ್‌ಹಿಟ್ ಸಾಂಗ್‌ಗೆ ಸ್ಟೇಪ್ ಹಾಕಿದ್ದಾರೆ. ಇನ್ನೂ ಈ ವೇದಿಕೆಯಲ್ಲಿ ನೋಡಿದವರು ಶಾಕ್ ಆಗಿ ಆಗಿದ್ದು ಗೆಸ್ಟಾ, ಇಲ್ಲ ಸ್ಪರ್ಧಿನಾ, ಇಲ್ಲ ಕಾಮಿಡಿಯನ್, ಎಂಬ ಪ್ರಶ್ನೆಗಳ ನಡುವೆ ಗೊಂದಲದಲ್ಲಿ ಸಿಲುಕಿದ್ದಾರೆ.
ಡಿಕೆಡಿ ಕಾರ್ಯಕ್ರಮದ ವೇದಿಕೆಗೆ ಬಂದ ಲಾಯರ್ ಜಗದೀಶ್‌ರನ್ನು ರಕ್ಷಿತಾ ಪ್ರೇಮ್ ಸ್ವಾಗತಿಸಿದ್ದಾರೆ. ಡಿಕೆಡಿಯ ಜಡ್ಜ್ ಆಗಿರುವ ರಕ್ಷಿತಾ ಪ್ರೇಮ್‌ರವರನ್ನು ಹಾಡಿ ಹೊಗಳಿದ್ದಾರೆ ಮತ್ತು ಅವರ ಸೌಂದರ್ಯದ ಬಗ್ಗೆ ವರ್ಣಿಸಿರುವ ಅವರು, ರಕ್ಷಿತಾರವರನ್ನು ನೋಡಿ ಎಲ್ಲವನ್ನೂ ಮರೆತುಬಿಟ್ಟೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಅದಕ್ಕೆ ನಟಿ ರಕ್ಷಿತಾ ನೀವು ನಾಟಿ ಅಟ್ 40 ಎಂದು ನಾಚಿ ನೀರಾಗಿದ್ದಾರೆ.