ಬಿಗ್‌ಬಾಸ್ ಶುರುವಾದ್ರೆ ಸಾಕು ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಈ ರೀಯಾಲಿಟಿ ಶೋ ನೋಡೇ ನೋಡ್ತಾರೆ. ಬಿಗ್‌ಬಾಸ್ ಸೀಸನ್ 1 ರಿಂದ ಬಿಗ್‌ಬಾಸ್ 11 ರವರೆಗೆ ಒಂದು ಒಂದು ಪ್ರೇಮ ಕಹಾನಿ ನಡೆಯುತ್ತಿರುತ್ತದೆ. ಒಂದೊಂದು ಸೀಸನ್‌ನಲ್ಲು ಒಂದೊಂದು ಜೋಡಿ ನಮಗೆ ಕಾಣಸಿಗುತ್ತದೆ. ಹಾಗೆಯೇ ಈ ಬಾರಿಯೂ ನೋಡುಗರು ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಜೋಡಿ ಚೆನ್ನಾಗಿದೆ ಎನ್ನುತ್ತಿದ್ದರೆ ಮತ್ತೊಂದೆಡೆ ಅನುಷಾ ಧರ್ಮ ಮತ್ತು ಐಶ್ವರ್ಯ ಧರ್ಮ ಎಂದು ಹೇಳುತ್ತಿದ್ದಾರೆ.
ಬಿಗ್‌ಬಾಸ್ ಸೀಜನ್ 11 ರಲ್ಲಿ ಐಶ್ವರ್ಯಾ ಸಿಂದೋಗಿ ತಮ್ಮ ಮೆಚ್ಯುರ್ ಮಾತುಗಳಿಂದ ಜನಮನ್ನಣೆಯನ್ನು ಪಡೆದಿದ್ದಾರೆ.ಬಿಗ್‌ಬಾಸ್ ಕೊಟ್ಟ ಜೋಡಿ ಟಾಸ್ಕಿನಲ್ಲಿ ಒಂದು ಟ್ವೀಸ್ಟ್ ನೀಡಲಾಗಿತ್ತು. ಅದೇನೆಂದರೆ ಒಂದು ಟ್ರಂಪ್ ಕಾರ್ಡ್ ಸ್ಪರ್ಧಿಯನ್ನು ಬಿಗ್‌ಬಾಸ್ ನೀಡಿದ್ದು, ಮನೆಯ ಹುಡುಗಿಯರು ತಮ್ಮ ಜೋಡಿಯನ್ನು ಬದಲಾಯಿಕೊಳ್ಳಬಹುದು ಎನ್ನುವ ಆಯ್ಕೆಯನ್ನು ಕೊಟ್ಟಿದ್ದರು.
ಈ ಅವಕಾಶವನ್ನು ಐಶ್ವರ್ಯಾ ಹಾಗೂ ಮೋಕ್ಷಿತಾರನ್ನು ಹೊರತುಪಡಿಸಿ ಮತ್ತೆ ಎಲ್ಲರೂ ತಮ್ಮ ತಮ್ಮ ಜೋಡಿಗಳನ್ನು ಚೆಂಜ್ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದರು.
ಟ್ರಂಪ್ ಕಾರ್ಡ್ ಸ್ಪರ್ಧಿಯಾಗಿ ತ್ರಿವಿಕ್ರಮ್ನನ್ನು ನೀಡಿದ್ದರು ಆದ್ದರಿಂದ ಮೋಕ್ಷಿತಾ ಬೇಡ ಎಂದಿದ್ದಾರೆ.
ಇನ್ನೂ ಐಶ್ವರ್ಯ ನನಗೆ ನೀಡಿರುವ ಜೋಡಿಯೇ ಸಾಕೆಂದು ನಾನು ಚೆಂಜ್ ಮಾಡುವುದಿಲ್ಲ ಎಂದು ತಮ್ಮ ದಿಟ್ಟ ಉತ್ತರವನ್ನು ನೀಡಿದರು.
ಐಶ್ವರ್ಯರ ನಿರ್ಧಾರ ಮತ್ತು ದಿಟ್ಟ ಉತ್ತರ ಬಿಗ್ ಬಾಸ್ ವೀಕ್ಷಕರ ಮನಸ್ಸನ್ನು ಗೆದ್ದಿತು.
ನಂತರ ಹೆಣ್ಮಕ್ಕಳ ಡಿಶಿಷನ್‌ನ್ನು ಬಿಗ್‌ಬಾಸ್ ಅನೌನ್ಸ್ ಮಾಡಿದಾಗ ಧರ್ಮ ಐಶ್ವರ್ಯರವರ ನಿರ್ಧಾರಕ್ಕೆ ಇಂಪ್ರೆಸ್ ಆಗಿ ಅಪ್ಪಿಕೊಂಡಿದ್ದಾರೆ ಎನ್ನಲಾಗಿದೆ.