ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಣುಮಕ್ಕಳನ್ನು ಕಾಪಾಡಿ, ಮಾನವೀಯತೆ ಮರೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂದು (29/01/2023) ಶ್ರೀ ಮಂಜುನಾಥ ಎಂ. ಚಾಲಕ, ಬಿ. ಸಂ. 697, ಶಿರಾ ಘಟಕರವರು ಅನುಸೂಚಿ ಸಂಖ್ಯೆ 31 ರಲ್ಲಿ ಶಿರಾ – ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ, ಸಮಯ ಸುಮಾರು 2:15 ಗಂಟೆಗೆ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಎರಡು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿ, ವಾಹನವನ್ನು ನಿಲ್ಲಿಸಿ ತಕ್ಷಣ ಕೆರೆಗೆ ಧುಮುಕಿ ಆ ಹೆಣ್ಣು ಮಕ್ಕಳನ್ನು ದಡಕ್ಕೆ ಸೇರಿಸಿ ಪ್ರಾಣ ಉಳಿಸಿದ್ದಾರೆ.
KSRTCಯ ವ್ಯವಸ್ಥಾಪಕ ನಿರ್ದೇಶಕ ಶ್ರೀ.ವಿ.ಅನ್ಬುಕುಮಾರ್ ಭಾ.ಆ.ಸೇ, ಅವರು ಮನತುಂಬಿ ಹಾರೈಸಿದ್ದು, ʼಸದರಿ ಚಾಲಕರ ಮಾನವೀಯ ಸಮಯೋಚಿತ ಕಾರ್ಯದಿಂದ ಎರಡು ಅತ್ಯಮೂಲ್ಯ ಜೀವ ಉಳಿದಿದ್ದು, ಇವರ ಮಾದರಿ ಕಾರ್ಯ ಅನನ್ಯʼ ಎಂದು ಬಣ್ಣಿಸಿದ್ದಾರೆ. ಕೆಎಸ್‌ಆರ್‌ಟಿಸಿ ನೌಕರರ ಇಂಥ ನಡೆಗಳು ಪ್ರಶಂಸೆಗೆ ಅರ್ಹವಾಗಿದ್ದು, ಅವರ ಮಾನವೀಯತೆಗೆ ʼಬಿಗ್ ಕನ್ನಡʼ ಸೆಲ್ಯೂಟ್ ಹೇಳುತ್ತದೆ.